ನವದೆಹಲಿ, ಜೂ.18 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಆತ್ಮಹತ್ಯೆ ಬಳಿಕ ಖಿನ್ನತೆಯ ಕುರಿತಾಗಿ ಹೆಚ್ಚಿನ ಚರ್ಚೆಗೆಳು ನಡೆಯುತ್ತಿದ್ದು ಈ ಬಗ್ಗೆ ಮಾತನಾಡಿರುವ ದೀಪಿಕಾ ಪಡುಕೋಣೆ ಡಯಾಬಿಟಿಸ್, ಕ್ಯಾನ್ಸರ್ನಂತೆ ಖಿನ್ನತೆ ಕೂಡಾ ಒಂದು ಖಾಯಿಲೆ ಎಂದು ಹೇಳಿದ್ದಾರೆ.
ದೀಪಿಕಾ ಈ ಹಿಂದೆ ತಾನು ಅನುಭವಿಸಿದ್ದ ಖಿನ್ನತೆ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಬರೆದುಕೊಂಡಿದ್ದು ಸುಶಾಂತ್ ಆತ್ಮಹತ್ಯೆ ಬಳಿಕ, ಖಿನ್ನತೆ ಒಂದು ಕಾಯಿಲೆ. ಇದನ್ನು ಮುಕ್ತವಾಗಿ ಹೇಳಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ತಿಳಿಸಿದ್ದಾರೆ.
ದೀಪಿಕಾ 2015ರಲ್ಲಿ ಖಿನ್ನತೆ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಪರಿಹಾರಕ್ಕೆಂದು ಲಿವ್ ಲವ್ ಲಾಫ್ ಫೌಂಡೇಶನ್ (ಟಿಎಲ್ಎಲ್ಎಲ್ಎಫ್)ನ್ನು ಆರಂಭಿಸಿದ್ದು ಖಿನ್ನತೆಗೆ ಒಳಗಾದವರು ಏನು ಮಾಡಬೇಕು? ಏನು ಪರಿಹಾರ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಲಹೆಗಳನ್ನು ನೀಡುತ್ತಲ್ಲೇ ಇದ್ದಾರೆ.
ಇನ್ನು ಸುಶಾಂತ್ ಆತ್ಮಹತ್ಯೆ ಬಳಿಕ ಹಲವು ನಟರು, ನಟಿಯರು ತಾವು ಈ ಮೊದಲು ಅನುಭವಿಸಿದ ಖಿನ್ನತೆ ಬಗ್ಗೆ ಹಂಚಿಕೊಂಡಿದ್ದಾರೆ.