ಮುಂಬೈ, ಜೂ.20 (DaijiworldNews/MB) : ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲಿ ಹಲವು ನಟರುಗಳು ತಾವು ಬಾಲಿವುಡ್ನ ಕೆಲವು ಸ್ಟಾರ್ ನಟರು ಹಾಗೂ ನಿರ್ದೇಶರಿಂದ ಅನುಭವಿಸಿದ ಕಷ್ಟಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. ಈಗಾಗಲೇ ತನಗೆ ಸಲ್ಮಾನ್ ಖಾನ್ ಕುಟುಂಬದಿಂದ ಜೀವ ಬೆದರಿಕೆ, ಕುಟುಂಬದ ಹೆಣ್ಣು ಮಕ್ಕಳ ಅತ್ಯಾಚಾರದ ಬೆದರಿಕೆ ಬಂದಿದ್ದು ತನ್ನ ವೃತ್ತಿ ಜೀವನವೇ ಹಾಳಗಿದೆ ಎಂದು ನಿರ್ದೇಶನ ಅಭಿನವ್ ಕಶ್ಯಪ್ ಹೇಳಿದ್ದು ಇದೀಗ ಸಲ್ಮಾನ್ ಖಾನ್ ಒಡೆತನದ ಬೀಯಿಂಗ್ ಹ್ಯೂಮನ್ ಸಂಸ್ಥೆಯ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ಬೀಯಿಂಗ್ ಹ್ಯೂಮನ್ ಕೇವಲ ತೋರಿಕೆಗೆ ಮಾತ್ರವಾಗಿದೆ. ದಬಾಂಗ್ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಕಣ್ಣ ಎದುರಲ್ಲೇ 5 ಸೈಕಲ್ಗಳನ್ನು ವಿತರಿಸಿದರು. ಮರುದಿನ ಪತ್ರಿಕೆಯಲ್ಲಿ ದಾನವೀರ ಸಲ್ಮಾನ್ನವರು 500 ಸೈಕಲ್ಗಳನ್ನು ಬಡವರಿಗೆ ವಿತರಿಸಿದರು ಎಂದು ಮುದ್ರಿಸಲಾಗಿತ್ತು ಎಂದು ಹೇಳಿದ್ದಾರೆ.
ಇದೆಲ್ಲವೂ ಸಲ್ಮಾನ್ ಖಾನ್ ವಿರುದ್ಧವಿದ್ದ ಗೂಂಡಾ ಪ್ರಕರಣಗಳಲ್ಲಿ ರಿಯಾಯಿತಿ ಪಡೆಯುವ ಉದ್ದೇಶದಿಂದ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಬೀಯಿಂಗ್ ಹ್ಯೂಮನ್ನಿಂದ 500 ರೂಪಾಯಿ ಜೀನ್ಸ್ ಅನ್ನು 5000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹೀಗೆಯೇ ಚಾರಿಟಿ ಹೆಸರಿನಲ್ಲಿ ಯಾವೆಲ್ಲಾ ರೀತಿಯಲ್ಲಿ ಹಣವನ್ನು ಲಾಂಡರಿಂಗ್ ಮಾಡುತ್ತಿರಬಹುದು ಎಂದು ತಿಳಿದಿಲ್ಲ. ಈ ಇವರು ಮುಗ್ಧ ಜನರ ಕಣ್ಣಿಗೆ ಧೂಳು ಕೆಡವಿ ಅವರಿಂದ ಎಷ್ಟು ಹಣ ಲೂಟಿ ಮಾಡುತ್ತಿದ್ದಾರೆ. ಅವರ ಉದ್ಧೇಶ ಯಾರಿಗೂ ಏನನ್ನು ನೀಡುವುದಲ್ಲ. ಬದಲಾಗಿ ಅವರಿಂದಲ್ಲೇ ಕಿತ್ತುಕೊಳ್ಳುವುದು ಎಂದು ಹೇಳಿದ್ದಾರೆ.
ಹಾಗೆಯೇ ಬೀಯಿಂಗ್ ಹ್ಯೂಮನ್ ಕುರಿತಾಗಿ ಸರ್ಕಾತರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ಅವರು ಈ ಬಗ್ಗೆ ನಾನು ಸರ್ಕಾರಕ್ಕೆ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದಾರೆ.