ಮುಂಬೈ, ಜೂ.21 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿ ತನ್ನ ವಿರುದ್ಧ ದೂರು ದಾಖಲಾದ ಬಳಿಕ, ತನ್ನ ಅಭಿಮಾನಿಗಳು ಸುಶಾಂತ್ ಸಿಂಗ್ ಕುಟುಂಬ ಹಾಗೂ ಅಭಿಮಾನಿಗಳ ಪರ ನಿಲ್ಲಿ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ನನ್ನ ಎಲ್ಲ ಅಭಿಮಾನಿಗಳಿಗೆ ಸುಶಾಂತ್ ಅವರ ಅಭಿಮಾನಿಗಳೊಂದಿಗೆ ನಿಲ್ಲಲು ಒಂದು ವಿನಂತಿ. ಭಾಷೆ ಹಾಗೂ ಬಳಸಿದ ಶಾಪಗಳ ಪ್ರಕಾರ ಹೋಗಬಾರದು. ಆದರೆ ಅದರ ಹಿಂದಿನ ಭಾವನೆಯೊಂದಿಗೆ ಹೋಗಬೇಕು. ಪ್ರೀತಿಪಾತ್ರರನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನಲ್ಲಿರುವ ಅವರ ಕುಟುಂಬ ಹಾಗೂ ಅಭಿಮಾನಿಗಳ ಬೆಂಬಲಕ್ಕೆ ನಿಲ್ಲಿ'' ಎಂದು ಹೇಳಿದ್ದಾರೆ.
ಜೂನ್ 14 ರಂದು ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ 34 ವರ್ಷದ ಸುಶಾಂತ್ ಸಿಂಗ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಮುಜಾಫರ್ ಪುರ್ ಮೂಲದ ವಕೀಲ ಸುಧೀರ್ ಕುಮಾರ್ ಓಜಾ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ನಿರ್ಮಾಪಕ ಅದಿತ್ಯಾ ಚೋಪ್ರಾ, ಕರಣ್ ಜೋಹರ್, ಏಕ್ತಾ ಕಪೂರ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂದು ದೂರು ನೀಡಿದ್ದರು.