ಬೆಂಗಳೂರು, ಜೂ.22 (DaijiworldNews/MB) : ಶರತ್ ಕುಮಾರ್ ನಿರ್ದೇಶನದ ಲುಂಗಿ ಸಿನಿಮಾದ ನಿರ್ದೇಶಕ ಅಕ್ಷಿತ್ ಶೆಟ್ಟಿ ಅಭಿನಯದ ಶ್ರೀ ಹರಿ ಕಥಾನಕ ಸಿನಿಮಾದ ಟ್ರೈಲರ್ ಶೀಘ್ರದಲ್ಲೇ ಜಗತ್ತಿನ ಅತೀ ದೊಡ್ಡ ಟ್ರೈಲರ್ ಆಗಿ ಬಿಡುಗಡೆಯಾಗಲಿದೆ.
ಈ ಸಿನಿಮಾ ತಡವು ನಿರ್ಮಾಪಕರ ಹುಡುಕಾಟಕ್ಕಾಗಿ ಟ್ರೈಲರ್ ಬಿಡುಗಡೆ ಮಾಡಲಿದೆ. ಇನ್ನು ಟ್ರೈಲರ್ ನಲ್ಲಿ ತುಳುನಾಡಿನ ಖ್ಯಾತ ಕಾಮಿಡಿ ನಟರುಗಳಿಬ್ಬರು ನಟಿಸಿದ್ದು ಟ್ರೈಲರ್ನಲ್ಲಿಯೇ ಅವರು ಯಾರು ಎಂದು ಜನರು ಕಾದು ನೋಡಬೇಕಿದೆ ಎಂದಿದೆ ಚಿತ್ರ ತಂಡ.
ಈ ಸಿನಿಮಾದ ಚಿತ್ರದ ಗೆಸ್ ದಿ ಟೈಟಲ್ ಪೋಸ್ಟರ್ ತುಳು ನಟ ಮತ್ತು ನಿರ್ದೇಶಕ ರೂಪೇಶ್ ಶೆಟ್ಟಿ ಬಿಡುಗಡೆಗೊಳಿಸಿದ್ದರು. ಚಿತ್ರದ ಫಸ್ಟ್ ಲುಕ್ ಟೈಟಲ್ ಪೋಸ್ಟರ್ನ್ನು ಕೆ.ಜಿ.ಎಫ್ ಮತ್ತು ಕಟಕ ಖ್ಯಾತಿಯ ರವಿ ಬಸ್ರೂರವರು ಬಿಡುಗಡೆಗೊಳಿಸಿದ್ದರು. ನಾಯಕ ನಟನ ಹೊಸ ಪರಿಚಯ ಪೋಸ್ಟರ್ನ್ನು ಟಗರು ಡಾಲಿ ಖ್ಯಾತಿಯ ನಟ ಧನಂಜಯ್ ಅವರು ಬಿಡುಗಡೆಗೊಳಿಸಿದರು.
ಅಕ್ಷಿತ್ ಶೆಟ್ಟಿ ಅವರು ಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದು ಒಂದು ಮೊಟ್ಟೆಯ ಕಥೆ ಚಿತ್ರದ ಖ್ಯಾತಿಯ ಶೈಲಶ್ರೀ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಜೋಯಲ್ ಶ್ಯಾಮನ್ ಡಿಸೋಜಾ ಮಾಡಲಿದ್ದು ರಾಹುಲ್ ವಸಿಷ್ಠ ಸಂಕಲನ ಮಾಡಿ ಚಿತ್ರಕ್ಕೆ ಜೀವ ತುಂಬಲಿದ್ದಾರೆ. ಪ್ರಸಾದ್ ಕೆ ಶೆಟ್ಟಿಯವರು ಸಿನಿಮಾಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಲಿದ್ದಾರೆ.