ಮುಂಬೈ, ಜೂ. 24 (DaijiworldNews/MB) : ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಒಂದು ಕಾಲದಲ್ಲಿ ತನಗೆ ಬಟ್ಟೆ ತೆಗೆದುಕೊಳ್ಳಲು ಹಣವಿಲ್ಲದ್ದನ್ನು ನೆನಪಿಸಿಕೊಂಡಿದ್ದು ಯಾರ ಸಹಾಯವಿಲ್ಲದೆಯೂ ಬಾಲಿವುಡ್ನಲ್ಲಿ ಈ ಅಲೆಗಳ ಎದುರು ಈಜುವುದು ಅಷ್ಟು ಸುಲಭವಾಗಿ ಇರಲಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ವಾಹಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, 2006ರಲ್ಲಿ ಬಿಡುಗಡೆಯಾದ ಗ್ಯಾಂಗ್ಸ್ಟಾರ್ ಎಂಬ ಸಿನಿಮಾದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ತೆರಳಲು ಬಟ್ಟೆ ತೆಗೆದುಕೊಳ್ಳಲು ನನ್ನ ಬಳಿ ಹಣ ಇರಲಿಲ್ಲ. ಆಗ ನನ್ನ ಫ್ಯಾಷನ್ ಡಿಸೈನರ್ ಆಗಿದ್ದ ರಿಕ್ ರಾಯ್ ನನಗೆ ಬಟ್ಟೆಗಳನ್ನು ವಿನ್ಯಾಸ ಮಾಡಿ ಕೊಟ್ಟಿದ್ದರು ಎಂದು ತಿಳಿಸಿದ್ದಾರೆ.
ಯಾರ ಸಹಾಯವಿಲ್ಲದೆಯೂ ಬಾಲಿವುಡ್ನಲ್ಲಿ ಈ ಅಲೆಗಳ ಎದುರು ಈಜುವುದು ಅಷ್ಟು ಸುಲಭವಾಗಿ ಇರಲಿಲ್ಲ. ಆ ದಿನದಲ್ಲೇ ನಾನು 50 ವರ್ಷವಾಗುವುದರಲ್ಲಿ ದೇಶದ ಶ್ರೀಮಂತರಲ್ಲಿ ಒಬ್ಬಳಾಗಿರಬೇಕು ಎಂದು ಕನಸು ಕಂಡಿದ್ದೆ ಎಂದು ತಿಳಿಸಿದ್ದಾರೆ.
ಯಾರ ಸಹಾಯವಿಲ್ಲದೆಯೂ ಬಾಲಿವುಡ್ನಲ್ಲಿ ಬೆಳೆದ ಕಂಗನಾ ಇದೀಗ ಬಾಲಿವುಡ್ನಲ್ಲಿ ತಮ್ಮ ಸಿನಿಮಾವನ್ನು ತಾನೇ ನಿರ್ಮಾಣ ಮಾಡುವ ಹಂತಕ್ಕೆ ಬಂದಿದ್ದಾರೆ.