ಬೆಂಗಳೂರು, ಜೂ. 25 (DaijiworldNews/MB) : ನಟ ರವಿಶಂಕರ್ ವಾಸವಿರುವ ಅಪಾರ್ಟ್ಮೆಂಟ್ನ ಎದುರು ಮನೆಯಲ್ಲಿ ಸೋಂಕು ಪತ್ತೆಯಾಗಿದ್ದು ನನ್ನ ಮಕ್ಕಳಿರುವ ಮನೆ ದೇವರೆ ಕಾಪಾಡಬೇಕು ಎಂದು ಹೇಳಿದ್ದಾರೆ.
ನಟ ರವಿಶಂಕರ್ ಅವರ ಮನೆಯ ಎದುರು ಮನೆಯಲ್ಲೇ ಕೊರೊನಾ ಸೋಂಕು ಪತ್ತೆಯಾಗಿದ್ದು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ರವಿಶಂಕರ್ ಅವರಿಗೆ ನಟ ಸುದೀಪ್, ಸೃಜನ್ ಲೋಕೇಶ್, ಗಣೇಶ್ ಅವರು ದೈರ್ಯ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಟ ರವಿಶಂಕರ್ ಅವರು, ನನ್ನ ಅಪಾರ್ಟ್ಮೆಂಟ್ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆ ದೇವರೆ ಕಾಪಾಡಬೇಕು. ಬಾಗಿಲನ್ನು 14 ದಿನ ತೆರೆಯುವಂತಿಲ್ಲ ಕ್ವಾರಂಟೈನ್. ಸುದೀಪ , ಗಣಪ , ಸೃಜಾನ , ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್ , ರಘುರಾಮ್ , ಧನ್ಯವಾದಗಳು ಎಂದಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಪತ್ನಿಗೆ ಕೊರೊನಾ ಇದೆ ಎಂದು ವದಂತಿಗಳು ಹರಿದಾಡಿದ್ದು ಇದೀಘ ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು, ನನಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಯಾವುದೇ ವದಂತಿಗಳನ್ನು ನೀವು ಕೇಳಿದ್ದರೆ ನಾನು ಸಂಪೂರ್ಣವಾಗಿ ಕ್ಷೇಮವಾಗಿದ್ದೇನೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಈ ಕಠಿಣ ಸಮಯದಲ್ಲಿ ಎಲ್ಲರೂ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ.
ದರ್ಶನ್ ಮತ್ತು ವಿಜಯಲಕ್ಷ್ಮಿ ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದು, ಅದೇ ಅಪಾರ್ಟ್ ಮೆಂಟ್ ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.