ಬೆಂಗಳೂರು, ಜು. 02 (DaijiworldNews/MB) : ''ಗಣೇಶ್ ಮತ್ತು ನಾನು ರಸ್ತೆಯಿಂದ ಬಂದವರು, ಯಾಮಾರಿಸಲು ಸ್ವಲ್ಪ ಕಷ್ಟ'' ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ 40ನೇ ವರ್ಷದ ಜನ್ಮ ದಿನವಾದ ಜುಲೈ 9 ರ ಗುರುವಾರದಂದು ಶುಭ ಹಾರೈಸಿ ಟ್ವೀಟ್ ಮಾಡಿರುವ ನಟ ಜಗ್ಗೇಶ್ ಅವರು, ನಾವಿಬ್ಬರು ನಾಣ್ಯದ ಎರಡು ಮುಖ! ಇವನು ಅಡಕಮಾರನಹಳ್ಳಿ ನಾನು ಜಡೆಮಾಯಸಂದ್ರ! ಇಬ್ಬರಿಗು ಪ್ರತಿಭೆಯೇ ಗಾಡ್ ಫಾದರ್.! ನನ್ನಂತೆ ಇವನಿಗೂ ಜೋತಿಷ್ಯಾಸ್ತ್ರ ಇಷ್ಟದ ವಿಷಯ! ನನ್ನಂತೆ ಅಳೆದು ತೂಗಿ ಜನ ಸೇರುತ್ತಾನೆ! ನನ್ನಂತೆ ಮೇಲೆ ನಗು ಒಳಗೆ ಒಬ್ಬನೆ ಜೀವಿಸುತ್ತಾನೆ !ನಮ್ಮಿಬ್ಬರನ್ನು ಅನ್ಯರು ಯಾಮಾರಿಸಲು ಸ್ವಲ್ಪ ಕಷ್ಟ! ಕಾರಣ ರಸ್ತೆಯಿಂದ ಬಂದವರು! ಹ್ಯಾಪಿ ಬರ್ತ್ಡೇ ಎಂದು ಹೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಣೇಶ್ ಥ್ಯಾಂಕ್ಯೂ ಅಣ್ಣ ಎಂದು ರೀಟ್ವೀಟ್ ಮಾಡಿದ್ದಾರೆ.
ಇನ್ನು ನಟ ಗಣೇಶ್ ಹುಟ್ಟು ಹಬ್ಬಕ್ಕೆ ಕನ್ಫೂಯ್ಸ್ ಆಗಿ ಜೂನ್ 30 ರಂದೇ ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಶುಭ ಹಾರೈಸಿದ್ದರು. ಬಳಿಕ ''ಇದನ್ನು ಅಡ್ವಾನ್ಸ್ ವಿಷ್ ಎಂದು ತಿಳಿದುಕೋ. ಕನ್ಪ್ಯೂಸ್ ಆಗಿ ಇಂದು ಮಾಡಿದ್ದೇನೆ'' ಎಂದು ತಿಳಿಸಿದ್ದರು.
ಇಂದು ನಟ ಗಣೇಶ್ಗೆ ನಿರ್ದೇಶಕ ಪ್ರೀತಮ್ ಗುಬ್ಬಿ, ರಘುರಾಮ್, ಹಾಸ್ಯ ನಟ ರವಿಶಂಕರ್ ಗೌಡ, ಧರ್ಮಣ್ಣ ಕಡೂರ್ ಸೇರಿದಂತೆ ಹಲವು ನಟರು ಸಾಮಾಜಿಕ ಜಾಲತಾಣದ ಮೂಲಕ ಶುಭಕೊರಿದ್ದಾರೆ.