ಮುಜಾಫುರಾಪುರ್, ಜು. 03 (DaijiworldNews/MB) : ಸಡಕ್-2 ಸಿನಿಮಾ ಪೋಸ್ಟರ್ನಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪ ಮಾಡಿ ನಟಿ ಅಲಿಯಾ ಭಟ್ ಸೇರಿದಂತೆ ನಿರ್ಮಾಪಕ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಸಿನಿಮಾದ ಪೋಸ್ಟರ್ನಲ್ಲಿ ಕೈಲಾಸ ಮಾನಸ ಸರೋವರ ಚಿತ್ರಗಳನ್ನು ಬಳಸಿದ್ದಾರೆ. ಇದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸಿಕಂದರಾಪುರ ನಿವಾಸಿ ಅಚಾರ್ಯ ಕಿಶೋರ್ ಪರಾಶರ್ ಎಂಬುವವರು ವಕೀಲ ಸೋನು ಕುಮಾರ ಮೂಲಕ ದೂರು ದಾಖಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಮುಖ್ಯ ನ್ಯಾಯಾಧೀಶ ಮುಂದಿನ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿದ್ದಾರೆ.
ಈ ಚಿತ್ರ 1991 ರ ಚಲನಚಿತ್ರ ಸಡಕ್ ಚಿತ್ರದ ಮುಂದುವರಿದ ಭಾಗವಾಗಿದ್ದು ಇದರಲ್ಲಿ ಸಂಜಯ್ ದತ್, ಆಲಿಯಾ ಭಟ್, ಪೂಜಾ ಭಟ್ ಮತ್ತು ಆದಿತ್ಯ ರಾಯ್ ಕಪೂರ್ ನಟಿಸಿದ್ದಾರೆ.