ಬೆಂಗಳೂರು, ಜು. 06 (DaijiworldNews/MB) : ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಶೋಕ್ದಾರ ಧನ್ವೀರ್ ಮನೆಗೆ ಭೇಟಿ ನೀಡಿದ್ದು ಈ ಪೋಟೋ ಇದೀಗ ಭಾರೀ ವೈರಲ್ ಆಗಿದೆ. ಜೊತೆಗೆ ಇವರಿಬ್ಬರಿಗೂ ನಡೆಯಲಿದೆಯಾ ಮದುವೆ ಎಂಬ ಸುದ್ದಿಗಳು ಕೂಡಾ ಹರಿದಾಡುತ್ತಿದೆ.
ಶೋಕ್ದಾರ ಧನ್ವೀರ್ ಅವರು ತನ್ನ ಇನ್ಸ್ಸ್ಟಾಗ್ರಾಂನಲ್ಲಿ ಈ ಫೋಟೋವನ್ನು ಹಾಕಿದ್ದು ಹಲವರು ಮದುವೆ ಮಾಡಿಕೊಳ್ಳಿ, ಶೀಘ್ರದಲ್ಲೇ ಮದುವೆ ಇದೆಯಾ, ಗೌಡ್ರು ಗೌಡತಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇನ್ನು ಈ ಭೇಟಿ ಯಾವುದೇ ಸಿನಿಮಾ ವಿಚಾರಕ್ಕೆ ಅಲ್ಲ ಎಂಬುದು ಮತ್ತಷ್ಟು ಕೂತೂಹಲಕ್ಕೆ ಕಾರಣವಾಗಿದೆ. ರಚಿತಾ ಮದುವೆ ವಿಷಯದಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದ ನಡುವೆ ಮಾಧ್ಯಮಕ್ಕೆ "ನಾವು ಗೌಡ್ರು ಆಗಿರುವುದರಿಂದ ಗೌಡ್ರು ಹುಡುಗರನ್ನೇ ಮದುವೆಯಾಗುವುದು" ಎಂದು ನಟಿ ರಚಿತಾ ರಾಮ್ ತಿಳಿಸಿದ್ದರು. ಈಗ ಗೌಡ್ರಾಗಿರು ಧನ್ವೀರ್ ಮನೆಗೆ ಡಿಂಪಲ್ ಕ್ವೀನ್ ರಚಿತಾ ಭೇಟಿ ನೀಡಿದ್ದು ಶೋಕ್ದಾರ ಧನ್ವೀರ್ಗೂ ರಚಿತಾಗೂ ನಡೆಯಲಿದೆಯಾ ಮದುವೆ? ಎಂದು ಕೂತೂಹಲ ಹುಟ್ಟುಹಾಕಿದೆ.
ಇನ್ನು ಧನ್ವೀರ್ ಅವರ ಬಂಪರ್ ಸಿನಿಮಾದಲ್ಲಿ ರಚಿತಾ ನಟಿಸುತ್ತಾರ ಎಂದು ಸುದ್ದಿಗಳು ಕೂಡಾ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಮಾಧ್ಯಮವೊಂದಕ್ಕೆ ತಿಳಿಸಿರುವ ಧನ್ವೀರ್, ಇದು ಅಚಾನಕ್ ಆಗಿ ಆದ ಭೇಟಿ. ರಚಿತಾ ನಮ್ಮ ಏರಿಯಾದ ಬಳಿ ಬಂದಿದ್ದು ನಮ್ಮ ಮನೆ ಇಲ್ಲೇ ಇರುವುದು ನೆನಪಾಗಿ ಕಾಲ್ ಮಾಡಿ ಮನೆಗೆ ಬಂದ್ರು. ಸ್ವಲ್ಪ ಹೊತ್ತು ಇದ್ದು ಮಾತುಕತೆ ನಡೆಸಿದರು. ನಾನು ನನ್ನ ಕುಟುಂಬಸ್ಥರನ್ನು ಪರಿಚಯ ಮಾಡಿಸಿದೆ. ಇದು ಯಾವುದೇ ಸಿನಿಮಾದ ಮಾತುಕತೆಗಾಗಿ ನಡೆದ ಮಾತುಕತೆಯಲ್ಲ. ಒಂದಷ್ಟು ಟಿಪ್ಸ್ ನೀಡಿದ್ದಾರೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ.