ಮುಂಬೈ, ಜು. 07 (DaijiworldNews/MB) : ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ 'ದಿಲ್ ಬೇಚಾರ' ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಯೂಟ್ಯೂಬ್ನಲ್ಲಿ ರಿಲೀಸ್ ಆಗಿದ್ದು ಒಂದು ದಿನದಲ್ಲೇ ಭಾರತದಲ್ಲೇ ಅತೀ ಅಧಿಕ ಲೈಕ್ಸ್ ಪಡೆದ ಮೊದಲ ಚಿತ್ರದ ಟ್ರೈಲರ್ ಆಗಿ ಹೊರಹೊಮ್ಮಿದೆ. ಸಾಮಾಜಿಕ ಜಾಲತಾಣದಲ್ಲಿ 4.8 ಮಿಲಿಯನ್ ಮಂದಿ ಟ್ರೈಲರ್ ಗೆ ಲೈಕ್ ಮಾಡಿದ್ದು ದಿಲ್ ಬೇಚಾರಾ ಟ್ರೈಲರ್ ಹಾಲಿವುಡ್ನ ಅವೆಂಜರ್ಸ್-ಇನ್ಫಿನಿಟಿ ವಾರ್ ಸಿನಿಮಾದ ದಾಖಲೆಯನ್ನು ಮುರಿದಿದೆ.
ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಟ್ರೆಂಡ್ ಸೆಂಟ್ ಮಾಡಿರುವ ಈ ಸಿನಿಮಾದ ಟ್ರೈಲರ್ 24 ಗಂಟೆಗಳಲ್ಲಿ 1,695,300 ಕ್ಕೂ ವೀವ್ಸ್ ಪಡೆದಿದೆ. 2,42 ,000 ಮಂದಿ ಈ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವೆಂಜರ್ಸ್ ಚಿತ್ರದ ಟ್ರೈಲರ್ಗೆ ಬಿಡುಗಡೆಯಾದ 24 ಗಂಟೆಗಳಲ್ಲಿ 3.8 ಮಿಲಿಯನ್ ಲೈಕ್ಸ್ ಬಂದಿತ್ತು. ಆದರೆ ದಿಲ್ ಬೇಚಾರ ಸಿನಿಮಾದ ಟ್ರೈಲರ್ಗೆ ಬಿಡುಗಡೆಯಾದ ಗಂಟೆಗಳಲ್ಲಿ 4.8 ಮಿಲಿಯನ್ ಲೈಕ್ಸ್ ಪಡೆದು ಅವೆಂಜರ್ಸ್ನ ದಾಖಲೆಯನ್ನು ಹಿಂದಿಕ್ಕಿದೆ.
ದಿಲ್ ಬೇಚಾರ ಸಿನಿಮಾದವು ಲೇಖಕ ಜಾನ್ ಗ್ರೀನ್ ಅವರು ಬರೆದಿರುವ 'ದಿ ಫಾಲ್ಟಿ ಇನ್ ಅವರ ಸ್ಚಾರ್ಸ್' ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ಮುಖೇಶ್ ಛಾಬ್ರಾ ಅವರು ಚಿತ್ರವನ್ನು ನಿರ್ದೇಶಣದಲ್ಲಿ ಮೂಡಿಬಂದಿದೆ. ಈ ಸಿನಿಮಾ ಮೇ 8ರಂದು ಬಿಡುಗಡೆಯಾಗಬೇಕಾಗಿದ್ದು ಕೊರೊನಾ ಲಾಕ್ಡೌನ್ ಕಾರಣದಿಂದ ಬಿಡುಗಡೆ ಮುಂದೂಡಲಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ರವರು ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ಕಳೆದ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು.