ಬೆಂಗಳೂರು, ಜು. 08 (DaijiworldNews/MB) : ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಬರ್ತ್ಡೇ ಮಂಗಳವಾರ (ಜುಲೈ 07) ರಂದು ನಡೆದಿದ್ದು ಹಲವರು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಆದರೆ ಈ ಮಧ್ಯೆ ಮಗ ರಣ್ವಿತ್ರಿಂದ ಸ್ಪೆಷಲ್ ವಿಷ್ ಬಂದಿದೆ.
ರಿಷಬ್ ಅವರ ಪತ್ನಿ ತನ್ನ ಮಗ ರಣ್ವಿತ್ ವಿಷ್ ಮಾಡಿರುವಂತೆ ಟ್ವೀಟ್ ಮಾಡಿದ್ದಾರೆ. ಇನ್ನೂ ಮಾತಿನಲ್ಲಿ ತೊದಲಿದೆ ಆದರೆ ಭಾವನೆಯಲಲ್ಲ...ಇನ್ನೂ ಹೆಜ್ಜೆಗಳು ತಪ್ಪುತ್ತವೆ , ನಡೆಸಲು ನೀನಿಹೆಯಲ್ಲ...ನಿನ್ನ ಭುಜದ ಮೇಲೊಂದು ನೆಮ್ಮದಿಯ ನಿದ್ದೆ ... ನಿನ್ನ ಕಥೆಯ ಕೇಳುತ್ತಿದ್ದೆ. ನೀನಿರುವಲ್ಲಿ ನನಗೊಂದು ಪ್ರಪಂಚ , ನಿನ್ನ ನಗುವಿನಲ್ಲಿ ಒಂದು ಮನೆಯ ಕಟ್ಟಿರುವೆ...ಪಪ್ಪ ಹ್ಯಾಪಿ ಬರ್ತಡೇ ! ಎಂದು ಮಗು ಹೇಳಿರುವಂತೆ ಟ್ವೀಟಿಸಿದ್ದಾರೆ.
ಇನ್ನು ನಟ ರಿಷಬ್ಗೆ ಪತ್ನಿ ಪ್ರಗತಿ ಅವರು ಕೂಡ ಜನ್ಮದಿನದ ಶುಭಾಶಯ ಕೋರಿದ್ದು, ಅನೇಕ ರೀತಿಗಳಲ್ಲಿ 'ನನ್ನ ಜೀವನವನ್ನು ಬದಲಾಯಿಸಿದ್ದಕ್ಕೆ ಧನ್ಯವಾದಗಳು. ನಮಗೆ ನೀವೇ ಎಲ್ಲವೂ. ನನ್ನ ಅಮೂಲ್ಯವಾದ ರತ್ನ ನೀವು. ನಮ್ಮ ಜೀವನ ಸಂತೋಷ ಮತ್ತು ಪ್ರೀತಿಯ ಹೊಳಪಿನಿಂದ ಹೊಳೆಯುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇನ್ನು ಹಲವು ನಟ, ನಟಿಯರು, ತಂತ್ರಜ್ಞರು ನಟ ರಿಷಬ್ ಶೆಟ್ಟಿಗೆ ವಿಷ್ ಮಾಡಿದ್ದಾರೆ.