ಮುಂಬೈ, ಜು. 09 (DaijiworldNews/MB) : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಿಕ್ರೇಟ್ ಒಂದನ್ನು ನಟಿ ಮಾಧುರಿ ದೀಕ್ಷಿತ್ ಅವರು ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ಅವರ ಸಿಕ್ರೇಟ್ ಬಿಚ್ಚಿಟ್ಟ ಮಾಧುರಿ ದೀಕ್ಷಿತ್ ಅವರು, ಅಕ್ಷಯ್ ಜೊತೆಯಲ್ಲಿ ಇದ್ದವರ ವಾಚ್ ಕದಿಯುತ್ತಾರೆ ಎಂದು ಹೇಳಿದ್ದಾರೆ.
ಹೌದು, ಅಕ್ಷಯ್ ಜೊತೆಯಲ್ಲಿದ್ದವರ ವಾಚ್ ಕದಿಯುತ್ತಾರೆ ಎಂದು ನಟಿ ಮಾಧುರಿ ದೀಕ್ಷಿತ್ ಹೇಳಿದ್ದು ಅದು ಕೂಡಾ ಯಾರಿಗೂ ತಿಳಿಯುವುದೇ ಇಲ್ಲ. ಅಕ್ಷಯ್ ತಾವಾಗಿಯೇ ಬಂದು ತಿಳಿಸಿದಾಗ ಮಾತ್ರ ವಾಚ್ ಇಲ್ಲದ್ದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಮತ್ತು ಮಾಧುರಿ ದೀಕ್ಷಿತ್ ಬಾಲಿವುಡ್ನ ಆರಜೂ ಮತ್ತು ದಿಲ್ ತೋ ಪಾಗಲ್ ಹೈ ಸಿನಿಮಾದಲ್ಲಿ ಮಾತ್ರ ಜೊತೆಯಾಗಿ ನಟಿಸಿದ್ದರು ಇಬ್ಬರು ಕೂಡಾ ಇಂದಿಗೂ ಆತ್ಮೀಯವಾಗಿದ್ದಾರೆ. ಲಾಕ್ಡೌನ್ ಕಾರಣದಿಂದ ಇಬ್ಬರು ಕೂಡಾ ತಮ್ಮ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.