ಮುಂಬೈ, ಜು.11 (DaijiworldNews/MB) : ಮದುವೆಯ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳದ ಅನುಷ್ಕಾ ಶರ್ಮಾ ಆಗಾಗ ಹಾಟ್ ಫೋಟೋಗಳ ಮೂಲವ ಸುದ್ದಿಯಾಗುತ್ತಿರುತ್ತಾರೆ. ಇದೀಗ ಇನ್ಸ್ಟಾದಲ್ಲಿ ಅವರು ಪೋಸ್ಟ್ ಮಾಡಿರುವ ಹಲವು ಫೋಟೋಗಳಿಗೆ ಪತಿ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನುಷ್ಕಾ ವೋಗ್ ಇಂಡಿಯಾ ಫೋಟೋಶೂಟ್ನಲ್ಲಿ ಭಾಗಿಯಾದ್ದು ಅದರ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಹಲವು ಹಾಟ್ ಫೋಟೋಗಳಿಗೆ ಕಾಮೆಂಟ್ ಮಾಡಿರುವ ವಿರಾಟ್ ಕೊಹ್ಲಿ, ಲವ್ ಇಮೋಜಿಗಳನ್ನು ಕಳುಹಿಸಿದ್ದಾರೆ. ಹಾಗೆಯೇ ಹಲವು ಜನರು ಅನುಷ್ಕಾ ಹಾಟ್ ಫೋಟೋಗೆ ಫಿದಾ ಆಗಿದ್ದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಕೆಲವರು ಅನುಷ್ಕಾ ಪತಿ ಕೊಹ್ಲಿ ಕಾಮೆಂಟ್ಗಾಗಿ ಕಾಯುತ್ತಿದ್ದೇವೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿದ್ದಾರೆ.
'ಝೀರೋ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕೊನೆಯದಾಗಿ ನಟಿಸಿರುವ ಅನುಷ್ಕಾ ಶರ್ಮಾ ಅವರು 'ಅಂಗ್ರೇಜಿ ಮಿಡಿಯಂ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾಹದ ಬಳಿಕ ಸಿನಿಮಾ ನಟನೆಯಿಂದ ದೂರ ಉಳಿದಿರುವ ಅನುಷ್ಕಾ ನಿರ್ಮಾಪನದತ್ತ ಹೆಜ್ಜೆ ಇಟ್ಟಿದ್ದಾರೆ. 'ಪಾತಾಳ್ ಲೋಕ್' ಹಾಗೂ 'ಬುಲ್ಬುಲ್' ವೆಬ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.