ಮುಂಬೈ, ಜು.12 (DaijiworldNews/MB) : ಅನಾರೋಗ್ಯ ಕಾರಣದಿಂದಾಗಿ ಬಾಲಿವುಡ್ನ ಹಿರಿಯ ನಟಿ ಹೇಮಾಮಾಲಿನಿ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ಹಲವಾರು ವದಂತಿಗಳು ಹರಡುತ್ತಿದೆ. ಈ ವದಂತಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿಸಿರುವ ನಟಿ ಹೇಮಾಮಾಲಿನಿ ಪುತ್ರಿ ಇಶಾ ಡಿಯೋಲ್, ಇಂತಹ ವದಂತಿಗಳಿಗೆ ಕಿವಿಕೊಡಬೇಡಿ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ತಾಯಿ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಅವರ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿ ಸಂಪೂರ್ಣವಾಗಿ ನಕಲಿ ಆದ್ದರಿಂದ ದಯವಿಟ್ಟು ಅಂತಹ ವದಂತಿಗಳಿಗೆ ಪ್ರತಿಕ್ರಿಯಿಸಬೇಡಿ! ಅವರ ಮೇಲೆ ಎಲ್ಲರಿಗೂ ಇರುವ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಸ್ವತಃ ಹೇಮಾಮಾಲಿನಿಯವರೇ ಪ್ರತಿಕ್ರಿಯಿಸಿದ್ದು ಕೆಲ ಸುದ್ದಿಗಳನ್ನು ಕೇಳಿ ಕೆಲವರು ಕಾಳಜಿ ತೋರಿಸುತ್ತಿದ್ದಾರೆ. ಆದರೆ ಆ ರೀತಿ ಯಾವುದೂ ಆಗಿಲ್ಲ. ಕೃಷ್ಣ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.
ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಈ ವದಂತಿಗಳು ಹರಿದಾಡುತ್ತಿದೆ. ಇನ್ನು ಇಂದು ಬಚ್ಚನ್ ಅವರ ಸೊಸೆ ಐಶ್ವರ್ಯಾ ರೈ ಹಾಗೂ ಐಶ್ವರ್ಯಾ ಪುತ್ರಿಗೂ ಕೊರೊನಾ ದೃಢಪಟ್ಟಿದೆ.