ಮುಂಬೈ, ಜು.14 (DaijiworldNews/MB) : ಬಾಲಿವುಡ್ ನಟಿ ರೇಖಾ ಅವರ ಮನೆಯ ಸೆಕ್ಯೂರಿಟಿ ಗಾರ್ಡ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಟಿ ರೇಖಾ ಕೊರೊನಾ ಪರೀಕ್ಷೆಗೆ ನೋ ಎಂದು ಹೇಳಿದ್ದಾರೆ.
ನಟಿ ರೇಖಾ ವಾಸವಿರುವ ಪ್ರದೇಶದ ನಾಲ್ವರು ಸೆಕ್ಯೂರಿಟಿ ಗಾರ್ಡ್ಗಳಿಗೆ ಕೊರೊನಾ ಸೋಂಕು ತಗುಲಿದೆ. ನಟಿ ರೇಖಾ ಮನೆಯ ಸೆಕ್ಯೂರಿಟಿ ಗಾರ್ಡ್ಗೂ ಕೊರೊನಾ ಸೋಂಕು ಪಾಸಿಟಿವ್ ಆದ ಕಾರಣದಿಂದ ನಟಿ ರೇಖಾ, ಮ್ಯಾನೇಜರ್ ಫರ್ಜಾನಾ ಸೇರಿದಂತೆ ಮನೆಯ ಕೆಲಸದ ನಾಲ್ವರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಮನೆಗೆ ಕೊರೊನಾ ಪರೀಕ್ಷೆ ನಡೆಸಲು ಬಂದ ಸಂದರ್ಭದಲ್ಲಿ ಮ್ಯಾನೇಜರ್ ಫರ್ಜಾನಾ ಬಾಗಿಲು ಕೂಡಾ ತೆಗೆಯಲಿಲ್ಲ ಎಂದು ದೂರಲಾಗಿದೆ.
ಬಾಗಿಲನ್ನು ತೆಗೆಯದ ಫರ್ಜಾನಾ ತನ್ನ ಮೊಬೈಲನ್ನು ಅಧಿಕಾರಿಗಳಿಗೆ ನೀಡಿ, ಅವರ ಆರೋಗ್ಯ ಚೆನ್ನಾಗಿದೆ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಹಲವು ದಿನದಿಂದ ಎಲ್ಲೂ ಹೋಗಿಲ್ಲ. ಯಾರ ಸಂಪರ್ಕಕ್ಕೂ ಬಂದಿಲ್ಲ. ಹಾಗಾಗಿ ಕೊರೊನಾ ಪರೀಕ್ಷೆ ಬೇಡ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಮಹಾನಗರ ಪಾಲಿಕೆ ರೇಖಾ ಮನೆಗೆ ಸ್ಯಾನಿಟೈಸ್ ಮಾಡಲು ಬಂದಿದ್ದು ಆ ಸಂದರ್ಭದಲ್ಲೂ ನಟಿ ಬಾಗಿಲು ತೆಗೆದಿಲ್ಲ ಎಂದು ಆರೋಪಿಸಲಾಗಿದೆ. ಕೊನೆಗೆ ಪಾಲಿಕೆ ಅಧಿಕಾರಿಗಳು ಸೆಕ್ಯೂರಿಟಿಯ ಕ್ಯಾಬಿನ್ನಲ್ಲಿ ಕ್ರಿಮಿನಾಶಕ ಸಿಂಪಡಿಸಿದ್ದಾರೆ.