ಮುಂಬೈ, ಜು 16 (DaijiworldNews/PY): ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ತವರು ಮನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಮುಗಿದ ನಂತರ ನೀವು ಏನು ಮಾಡುತ್ತೀರಿ ಎಂದು ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲಾಕ್ಡೌನ್ ಮುಗಿದ ಮೇಲೆ ಮೊದಲು ಅಪ್ಪ, ಅಮ್ಮ ಹಾಗೂ ತಂಗಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ತಮ್ಮ ತವರು ಮನೆಯ ನೆನಪು ಮಾಡಿಕೊಂಡಿದ್ದಾರೆ.
ಬಳಿಕ ಇನ್ನೋರ್ವ ಅಭಿಮಾನಿ ಪ್ರಶ್ನೆ ಕೇಳಿದ್ದು, ವಿಚಿತ್ರ ಟ್ಯಾಲೆಂಟ್ ಅಂದರೆ ಏನು ಎಂದು ಕೇಳಿದ್ದರು. ರಣವೀರ್ ಅಥವಾ ನನ್ನ ಸಹೋದರಿಗೆ ಈ ಪ್ರಶ್ನೆಯನ್ನು ಕೇಳಬೇಕು. ಇಬ್ಬರಿಗೂ ತಾವೇನು ಮಾಡುತ್ತಿದ್ದೇವೆ ಎನ್ನುವುದೇ ತಿಳಿದಿರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಲಾಕ್ಡೌನ್ ಕಾರಣ ಚಿತ್ರೀಕರಣ ಸ್ಥಗಿತಗೊಂಡಿತ್ತು. ಆದರೆ, ಚಿತ್ರೀಕರಣಕ್ಕೆ ಅನುಮತಿ ದೊರೆತರೂ ಕೂಡಾ ಶೂಟಿಂಗ್ ಮಾತ್ರ ಪ್ರಾರಂಭವಾಗಿಲ್ಲ. ಸದ್ಯ ದೀಪಿಕಾ ಪಡುಕೋಣೆ ಅವರು ಪತಿ ರಣವೀರ್ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇಬ್ಬರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ವಿವ್ ಆಗಿರುತ್ತಾರೆ.