ಬೆಂಗಳೂರು, ಆ. 30(DaijiworldNews/HR): ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಶುಗರ್ ಲೆಸ್' ಸಿನಿಮಾಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಆಯ್ಕೆಯಾಗಿದ್ದಾರೆ.
ನಿರ್ಮಾಣದಿಂದ ನಿರ್ದೇಶನಕ್ಕೆ ಕಾಲಿಟ್ಟ ಕೆ ಎಂ ಶಶಿಧರ್ ಅವರ ಮೊದಲ ನಿರ್ದೇಶನದ ಚಿತ್ರ ಶುಗರ್ ಲೆಸ್ ಆಗಿದ್ದು, ಸಿನಿಮಾ ಮುಹೂರ್ತ ಸಂದರ್ಭದಲ್ಲಿ ಪ್ರಿಯಾಂಕಾ ಆಯ್ಕೆ ಕುರಿತು ಘೋಷಿಸಲಾಯಿತು.
ಮೊದಲಿಗೆ ಗಣಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪ್ರಿಯಾಂಕಾ ತಮಿಳು ಮತ್ತು ಮಲಯಾಳಂನಲ್ಲಿ ಕೂಡ ನಟಿಸಿದ್ದಾರೆ. ಪಟಾಕಿ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ ಇದೀಗ ತಮ್ಮ ಬಹು ನಿರೀಕ್ಷಿತ ಸಿನಿಮ ಭೀಮ ಸೇನ ನಳ ಮಹರಾಜ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.
ಇನ್ನು ಸೆಪ್ಟೆಂಬರ್ 14ರಿಂದ ಶುಗರ್ ಲೆಸ್ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ನಾಯಕ ನಟ ಪೃಥ್ವಿ ಅಂಬರ್ ಈ ಸಿನಿಮಾದ ಜೊತೆಗೆ ಲೈಫ್ ಈಸ್ ಬ್ಯೂಟಿಫುಲ್ ನಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಸಕ್ಕರೆ ಕಾಯಿಲೆ ಹೊಂದಿರುವ ಯುವಜನತೆಯ ಕಥೆಯನ್ನು ತೋರಿಸಲಾಗುತ್ತದೆ.