ಕೊಪ್ಪಳ, ಅ. 28 (DaijiworldNews/MB) : ಜೇಮ್ಸ್ ಕನ್ನಡ ಸಿನಿಮಾ ತಂಡ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸರ್ಕಾರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಸರ್ಕಾರಿ ಶಾಲೆಯೊಂದಕ್ಕೆ 1 ಲಕ್ಷ ದೇಣಿಗೆ ನೀಡಿದ್ದಾರೆ.
ಕೊಪ್ಪಳದಲ್ಲಿ ಜೇಮ್ಸ್ ಸಿನಿಮಾದ ಶೂಟೀಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಆಹ್ವಾನದಂತೆ ಪುನೀತ್ ರಾಜ್ ಕುಮಾರ್ ಅವರು ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಈಗ ತಮ್ಮ ಸಿನಿಮಾ ಜೇಮ್ಸ್ ತಂಡದೊಂದಿಗೆ ಕೈ ಜೋಡಿಸಿ ಸರ್ಕಾರಿ ಶಾಲೆಯ ಮೂಲಭೂತ ಸೌಕರ್ಯ ಸುಧಾರಣೆಗೆ ನೆರವಾಗಿದ್ದಾರೆ.
ತಮಗೆ ಸಹಾಯಹಸ್ತ ಚಾಚಿದ ಪುನೀತ್ ರಾಜ್ ಕುಮಾರ್ ಹಾಗೂ ಜೇಮ್ಸ್ ತಂಡಕ್ಕೆ ಶಾಲಾ ಸಿಬ್ಬಂದಿಗಳು ಧನ್ಯವಾದ ತಿಳಿಸಿದ್ದು, ಪುನೀತ್ ಅಭಿನಯದ ಜೇಮ್ಸ್ ಚಿತ್ರ ತಂಡಕ್ಕೆ ಯಶಸ್ಸು ದೊರೆಯಲೆಂದು ಹಾರೈಸಿದ್ದಾರೆ.
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾವನ್ನು ಕಿಶೋರ್ ಪ್ರೋಡಕ್ಷನ್ ನಿರ್ಮಾಣ ಮಾಡುತ್ತಿದೆ. ಪುನೀತ್ ರಾಜ್ ಕುಮಾರ್ ನಾಯಕರಾಗಿ ನಟಿಸಿದ್ದು ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತಾ ನೀಡಲಿದ್ದಾರೆ.