ಬೆಂಗಳೂರು, ಅ.30 (DaijiworldNews/HR): ಕನ್ನಡ ಸಿನಿಮಾ ಶುಗರ್ಲೆಸ್ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟ ರಾಕ್ಲೈನ್ ಸುಧಾಕರ್ ಅವರ ನಿಧನದಿಂದ ಖಾಲಿಯಾದ ಜಾಗವನ್ನು ಇದೀಗ ತುಳು ಚಿತ್ರ ನಟ, ಮಜಾ ಟಾಕೀಸ್ ನ ಕಾಮಿಡಿ ಸ್ಟಾರ್ ಕುಸೆಲ್ದರಸೆ ನವೀನ್ ಡಿ. ಪಡೀಲ್ ಅವರು ತುಂಬುತ್ತಿದ್ದಾರೆ.
ದಿವಂಗತ ಸುಧಾಕರ್ ಅವರ ಪಾತ್ರದ ಹಲವಾರು ಸನ್ನಿವೇಶಗಳನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಈಗ ಅದೇ ದೃಶ್ಯಗಳನ್ನು ನವೀನ್ ಅವರೊಂದಿಗೆ ಚಿತ್ರಿಸಲಾಗುತ್ತಿದೆ.
ಈ ಪಾತ್ರದ ಕುರಿತು ಪ್ರತಿಕ್ರಿಯಿಸಿದ ನವೀನ್, ಸುಧಾಕರ್ ನಿಧನರಾದ ಕೆಲವು ದಿನಗಳ ನಂತರ ನಿರ್ದೇಶಕ ಶಶಿಕಾಂತ್ ಸೇರಿದಂತೆ ಚಿತ್ರದ ತಂಡದ ಹಲವರು ನನನ್ನು ಸಂಪರ್ಕಿಸಿದರು. ತಕ್ಷಣವೇ ಚಿತ್ರೀಕರಣಕ್ಕೆ ಒಪ್ಪಿದೆ. ಈ ಪಾತ್ರ ನನಗೆ ಉತ್ಸಾಹ ತುಂಬಿದೆ. ಇನ್ನೊಂದು ವಿಶೇಷವೆಂದರೆ ಇದರಲ್ಲಿ ಸುಧಾಕರ್ ಅವರದ್ದು ಮಂಗಳೂರಿನವರ ಪಾತ್ರ. ಆ ಪಾತ್ರ ನನಗೆ ಸಿಕ್ಕಿದೆ. ದತ್ತಣ್ಣನಂಥ ಹಿರಿಯ, ಅನುಭವಿ ಕಲಾವಿದರೊಂದಿಗೆ ನಟಿಸುವುದು ಒಂದು ಖುಷಿಯ ವಿಚಾರ ಎಂದು ನವೀನ್ ಹೇಳಿದ್ದಾರೆ.
ಇನ್ನು ಶುಗರ್ಲೆಸ್ ಸಿನಿಮಾದಲ್ಲಿ ಮಧುಮೇಹ ನಿಭಾಯಿಸುವ ಯುವಕನಾಗಿ ಪ್ರಥ್ವಿ ಅಂಬಾರ್ ಗೆ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಲಿದ್ದಾರೆ.