ಬೆಂಗಳೂರು,ನ.14 (DaijiworldNews/HR): ಸ್ಯಾಂಡಲ್ವುಡ್ ನಟಿ ಮಯೂರಿ ದೀಪಾವಳಿ ದಿನದಂದೇ ತಾನು ತಾಯಿಯಾಗುತ್ತಿರುವ ಗುಡ್ ನ್ಯೂಸನ್ನು ಬಹಿರಂಗಪಡಿಸಿದ್ದಾರೆ.
ಈ ಕುರಿತು ಮಯೂರಿ ತಮ್ಮ ಇನ್ಸ್ಟಾಗ್ರಾಮ್ನ ಮೂಲಕ ತಾನು ತಾಯಿಯಾಗುತ್ತಿರುವ ವಿಚಾರ ತಿಳಿಸಿದ್ದಾರೆ.
ಪ್ರೆಗ್ನೆನ್ಸಿ ಫೋಟೋಶೂಟ್ ಈಗಾಗಲೇ ಮಾಡಿಕೊಂಡಿರುವ ಅವರು ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನನ್ನ ಪುಟ್ಟ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಮಯೂರಿಯವರು 2020 ಜೂನ್ 12ರಂದು ತನ್ನ ಗೆಳೆಯ ಅರುಣ್ ಜೊತೆ ಮದುವೆಯಾಗಿದ್ದರು.
ಮಯೂರಿ ಮೊದಲಿಗೆ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು, ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.