ಆ 01 (DaijiworldNews/HR): ಇತ್ತೀಚೆಗಷ್ಟೆ ವಿಚ್ಚೇದನಗೊಂಡಿರುವ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಮತ್ತೆ ಒಟ್ಟಿಗೆ ಸಿನಿಮಾದಲ್ಲಿ ನಟಿಸಲಿದ್ದೀರ ಎಂಬ ಪ್ರಶ್ನೆಗೆ ನಾಗಚೈತನ್ಯ ನೀಡಿರುವ ಉತ್ತರ ಅಚ್ಚರಿ ಮೂಡಿಸಿದೆ.

ದೂರವಾಗಿರುವ ಈ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಜೋಡಿ ಮತ್ತೆ ಒಂದಾಗಬೇಕೆಂದು ಅಭಿಮಾನಿಗಳು ಹಂಬಲಿಸುತ್ತಿದ್ದು, ಈ ಕುರಿತಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ನಟ, ಈ ಪರಿಸ್ಥಿತಿ ಒದಗಿ ಬಂದಿದರೆ ಅದು ಹುಚ್ಚುತನವಾಗುತ್ತದೆ. ಅದು ನನಗೆ ಗೊತ್ತಿಲ್ಲ. ಇದಕ್ಕೆ ಕಾಲವೇ ನಿರ್ಧರಿಸುತ್ತದೆ ಎಂದಿದ್ದಾರೆ.
ಇನ್ನು ಸಿನಿಮಾದಲ್ಲಿ ಅತ್ಯುತ್ತಮ ಕೆಮಿಸ್ಟ್ರಿ ಯಾರ ಜೊತೆ ಎಂದು ಕೇಳಿದಾಗ, ಸಮಂತಾ ಜತೆ ಎಂದು ನಾಗಚೈತನ್ಯ ಉತ್ತರಿಸಿದ್ದರು. ಆದರೆ ಇದೀಗ ಸಿನಿಮಾದ ಕುರಿತಾದ ಅವರ ಹೇಳಿಕೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.