ಲಂಡನ್,ಮಾ.15(AZM):ಬಾಲಿವುಡ್ ನ ಸುಂದರಿ ದೀಪಿಕಾ ಪಡುಕೋಣೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಇಷ್ಟರವರೆಗೆ ಬಾಲಿವುಡ್ ನಲ್ಲಿ ಕಂಗೊಳಿಸುತ್ತಿದ್ದ ದೀಪಿಕಾ ಇದೀಗ ಹಾಲಿವುಡ್ ಗೆ ಕಾಲಿಡುವ ಮೂಲಕ ಇಡೀ ವಿಶ್ವವ್ಯಾಪಿ ಗುರುತಿಸಿಕೊಳ್ಳುವವರಾಗುತ್ತಿದ್ದಾರೆ.ಹಾಲಿವುಡ್ ನಟ ಡೈಸೆಲ್ ಜೊತೆ ನಟಿಸಲು ಮಾ.14ರಂದು ದೀಪಿಕಾ ಲಂಡನ್ ತೆರಳಿದ್ದಾರೆ. ಲಂಡನ್ ನಲ್ಲಿ ಈಗಾಗಲೇ ದೀಪಿಕಾರವರ ಮೇಣದ ಪ್ರತಿಮೆ ತಯಾರಿಸಿದ್ದು, ಪ್ರತಿಮೆ ನೋಡಿ ದೀಪಿಕಾರವರೇ ಅಚ್ಚರಿಗೊಂಡಿದ್ದಾರೆ.
ಇಂದು ಲಂಡನ್ ಗೆ ತೆರಳಿದ ದೀಪಿಕಾ ತಮ್ಮದೇ ಪ್ರತಿಮೆ ನೋಡಿ ಅಚ್ಚರಿಗೊಂಡರಲ್ಲದೆ, ಪ್ರತಿಮೆಯ ಜೊತೆ ನಿಂತು ಫೋಟೋವನ್ನು ಕ್ಲಿಕ್ಕಿಸಿ ತಮ್ಮ ಸಾಮಾಜಿಕ ಜಾಲತಾಣ ಪೇಜ್ಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಮೇಣದ ಪ್ರತಿಮೆಯ ಕುರಿತು ಮಾತನಾಡಿದ ದೀಪಿಕಾರವರು, "ಇದೊಂಥರಾ ಧನ್ಯತಾ ಭಾವ ಅನುಭವಿಸುವ ಸಮಯವಾಗಿದೆ. ನಾನು ನನ್ನ ಅಭಿಮಾನಿಗಳಿಗೆ ಹಾಗೂ ಜಗತ್ತಿಗೆ ಕೊಡಬಹುದಾದ ಪ್ರೀತಿಯ ಕಾಣಿಕೆ ಇದಾಗಿದೆ. ನನ್ನ ಮೇಣದ ಪ್ರತಿಮೆಯನ್ನು ನಾನು ನೋಡುತ್ತಿದ್ದರೆ ನನಗೆ ನಿಜವಾಗಿಯೂ ಅಚ್ಚರಿ ಹಾಗೂ ಖುಷಿಗಳ ಸಂಗಮದ ಭಾವ ಮನದಲ್ಲಿ ಬಂದು ಹೋಗುತ್ತದೆ" ಎಂದಿದ್ದಾರೆ.
ಸದ್ಯದಲ್ಲೇ ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಲು ತೊಡಗಿರುವ ದೀಪಿಕಾ ಪಡುಕೋಣೆ ಯವರು ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ.