ಮುಂಬೈ ಸೆ 03 (DaijiworldNews/AK):ನಟಿ ರಾಖಿ ಸಾವಂತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಪತಿ ಆದಿಲ್ ಖಾನ್ ದುರಾನಿ ಜೊತೆ ಅವರು ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಮೆಕ್ಕಾ ಮದೀನಾಗೆ ಭೇಟಿ ನೀಡಿ ಬಂದಿರುವ ರಾಖಿ ಅವರ ಮಾತಿನ ವರಸೆ ವೇಷ-ಭೂಷಣ ಕೂಡ ಬದಲಾಗಿ ಹೋಗಿದೆ.
ರಾಖಿ ಸಾವಂತ್ ಈಗ ಮೈ ತುಂಬಾ ಬಟ್ಟೆ ಧರಿಸುತ್ತಿದ್ದಾರೆ. ಅಲ್ಲದೇ ‘ಗಂಡಸರು ಹತ್ತಿರಕ್ಕೆ ಬಂದರೆ ಹುಷಾರ್’ ಎಂದು ಹೇಳುತ್ತಿದ್ದಾರೆ. ಆ ರೀತಿ ಅವರು ಕೂಗಾಡಿದ ವಿಡಿಯೋ ವೈರಲ್ ಆಗಿದೆ.
ತಮ್ಮ ಫೋಟೋ ಕ್ಲಿಕ್ಕಿಸಲು ಬಂದ ಪಾಪರಾಜಿಗಳು ಮತ್ತು ಪುರುಷ ಅಭಿಮಾನಿಗಳನ್ನು ಕಂಡು ರಾಖಿ ಸಾವಂತ್ ಕೂಗಾಡಿದ್ದಾರೆ. ಮೆಕ್ಕಾ ಮದೀನಾಗೆ ಹೋಗಿ ಬಂದ ಬಳಿಕ ಅವರಲ್ಲಿ ಬದಲಾವಣೆ ಕಂಡು ಎಲ್ಲರಿಗೂ ಆಶ್ಚರ್ಯವಾಗಿದೆ.
ಇತ್ತೀಚೆಗೆ ರಾಖಿ ಸಾವಂತ್ ಅವರು ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ‘ನಾನು ಮೆಕ್ಕಾ ಮದೀನಾಗೆ ಹೋಗಿ ಬಂದಿದ್ದೇನೆ. ಗಂಡಸರು ದೂರ ನಿಲ್ಲಿ. ನನ್ನನ್ನು ಮುಟ್ಟಬೇಡಿ. ನಾನು ಪವಿತ್ರಳಾಗಿದ್ದೇನೆ’ ಎಂದು ರಾಖಿ ಸಾವಂತ್ ಕಿಡಿಕಾರಿದ್ದಾರೆ.