ಮುಂಬೈ: ಡಿ 14 (DaijiworldNews/MR): ಬಾಲಿವುಡ್ನ ಖ್ಯಾತ ನಟ ಶಾರುಕ್ ಖಾನ್ ನಟನೆಯ 'ಡಂಕಿ' ಸಿನಿಮಾದ ಬಿಡುಗಡೆಗೂ ಮುನ್ನ, ತಮ್ಮ ಪುತ್ರಿ ಸುಹಾನಾ ಖಾನ್ ಅವರೊಂದಿಗೆ ಶಿರಡಿಯ ಸಾಯಿಬಾಬಾ ದೇಗುಲಕ್ಕೆ ಶಾರುಕ್ ಖಾನ್ ಭೇಟಿ ನೀಡಿದ್ದಾರೆ.
ಶಾರುಕ್ ಖಾನ್ ಅವರನ್ನ ನೋಡಲು ಅಭಿಮಾನಿಗಳ ಸಮೂಹವೇ ಅಲ್ಲಿ ನೆರದಿದ್ದ ಕಾರಣ, ದೇಗುಲದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇನ್ನೂ ಶಾರೂಕ್ ಖಾನ್ ಅವರ ಜೊತೆಗೆ ಅವರ ಮ್ಯಾನೇಜರ್ ಆಗಿರುವಂತಹ ಪೂಜಾ ದದ್ಲಾನಿ ಕೂಡ ಸಾಥ್ ನೀಡಿದರು.
ಎರಡು ದಿನಗಳ ಹಿಂದೆಯಷ್ಟೆ ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಅದಲ್ಲದೇ ತಮ್ಮ ಜವಾನ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಕೂಡ ಪುತ್ರಿ ಸುಹಾನಾ ಜೊತೆ ಭೇಟಿ ನೀಡಿದ್ದರು.
ಶಾರುಕ್ ಖಾನ್ ಅಭಿನಯದ 'ಡಂಕಿ' ಚಿತ್ರವು ಇದೇ ಡಿ.21ರಂದು ಬಿಡುಗಡೆಯಾಗಲಿದ್ದು. 2023ರಲ್ಲಿ ಬಿಡುಗಡೆಯಾಗಲಿರುವ ಮೂರನೇ ಚಿತ್ರ ಇದಾಗಲಿದೆ. ಈ ಹಿಂದೆ 'ಪಠಾಣ್' ಹಾಗೂ 'ಜವಾನ್' ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಹಿಟ್ ಆಗಿತ್ತು.
ಶಾರುಕ್ ಖಾನ್ ಅವರ ಪುತ್ರಿ ಸುಹಾನಾ ಇತ್ತೀಚೆಗೆ ನೆಟ್ ಪ್ಲಿಕ್ಸ್ ನಲ್ಲಿ ಬಿಡುಗಡೆಯಾದ 'ದಿ ಆರ್ಚೀಸ್'ನಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಪುತ್ರಿ ಸುಹಾನಾ ಕೂಡ ಮೊದಲ ಹೆಜ್ಜೆ ಇಟ್ಟಿದ್ದಾರೆ.