ಅಯೋಧ್ಯೆ,ಮಾ 20(DaijiworldNews/ AK): ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಕುಟುಂಬ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪತಿ ನಿಕ್ ಜೋನಸ್ ಮತ್ತು ಮಗಳ ಜೊತೆ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ವೈರಲ್ ಆಗಿದೆ.

ಪತಿ ನಿಕ್ ಮತ್ತು ಪುತ್ರಿ ಜೊತೆ ಅಯೋಧ್ಯೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ರಾಮಮಂದಿರದಲ್ಲಿ ಕೆಲ ಸಮಯ ಕಳೆದಿದ್ದಾರೆ. ಭಾರತಕ್ಕೆ ಬಂದು ಅಯೋಧ್ಯೆಗೆ ಪ್ರಿಯಾಂಕಾ ಭೇಟಿ ಕೊಟ್ಟಿರೋದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ವರ್ಷ ಪರಿಣಿತಿ ಚೋಪ್ರಾ ಎಂಗೇಜ್ಮೆಂಟ್ಗೆ ಹಾಜರಿ ಹಾಕಿದ ಬಳಿಕ ಇದೀಗ ಭಾರತಕ್ಕೆ ಪ್ರಿಯಾಂಕಾ ಚೋಪ್ರಾ ಬಂದಿದ್ದಾರೆ. ಪ್ರಿಯಾಂಕಾ ಮುಂಬೈನಲ್ಲಿ ಸಮಯ ಕಳೆಯುತ್ತಿದ್ದು, ಅಂಬಾನಿ ಕುಟುಂಬದ ಪಾರ್ಟಿ ಸೇರಿದಂತೆ ಹಲವು ಕಡೆ ಭೇಟಿ ನೀಡುತ್ತಿದ್ದಾರೆ. ಸದ್ಯ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ