ಚೆನೈ, ಮಾ 22(DaijiworldNews/AK):17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ (IPL) ಅದ್ಧೂರಿಯಾಗಿ ಇಂದು (ಮಾ.22) ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಟೈಗರ್ ಶ್ರಾಫ್ ಇಬ್ಬರು ಹಿಂದಿ ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಗೆ ಹೆಜ್ಜೆ ಹಾಕುವ ಮೂಲಕ ನೋಡಗರನ್ನು ಕಮಾಲ್ ಮಾಡಿದರು.

ಚೆನೈ, ಚೇಪಾಕ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಆಯೋಜಿಸಿತ್ತು. ಮಾ.22ರ ಸಂಜೆ 6:30ಕ್ಕೆ ಸಮಾರಂಭ ಆರಂಭವಾಗಿದೆ. ವೇದಿಕೆಗೆ ಎಂಟ್ರಿ ಕೊಡುವಾಗಲೇ ತ್ರಿವರ್ಣ ಧ್ವಜ ಹಿಡಿದು ಅಕ್ಷಯ್ ಕುಮಾರ್ ಹೆಜ್ಜೆ ಹಾಕಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್, ಖ್ಯಾತ ಗಾಯಕ ಸೋನು ನಿಗಮ್ ಸೇರಿದಂತೆ ಪ್ರಮುಖರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಐಪಿಎಲ್ ಸುಂದರ ಸಂಜೆಗೆ ಎ.ಆರ್ ರೆಹಮಾನ್ ಮತ್ತು ಸೋನು ನಿಗಮ್ ಹಾಡು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದ್ದಾರೆ.