ನವದೆಹಲಿ, ಮಾ 23(DaijiworldNews/MS): ನಿಷ್ಠುರವಾಗಿ ಮತ್ತು ನೇರವಾಗಿ ಹೇಳಿಕೆ ನೀಡುವ ನಟಿ ಕಂಗನಾ ರಣಾವತ್ ಇಂದು 37 ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳ ಪಾಲಿಗೆ ಬಾಲಿವುಡ್ನ ಕ್ವೀನ್ ಆಗಿರುವ ಕಂಗನಾ 2006ರಲ್ಲಿ ರಿಲೀಸ್ ಆದ ‘ಗ್ಯಾಂಗ್ಸ್ಟರ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಹಿಮಾಚಲ ಪ್ರದೇಶದ ಭಂಬಾಲಾದಲ್ಲಿಹುಟ್ಟಿ ಬೆಳೆದ ಕಂಗನಾ ಸಾಧಾರಣ ಕುಟುಂಬದಿಂದ ಬಂದವರು. ತಂದೆ ಅಮರ್ದೀಪ್ ರಣಾವತ್ ಉದ್ಯಮಿ, ತಾಯಿ ಆಶಾ ರಣಾವತ್ ಶಿಕ್ಷಕಿಯಾಗಿದ್ದರು.ಕಂಗನಾ ಅವರ ಪೋಷಕರಿಗೆ ತಮ್ಮ ಮಗಳು ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಆದರೆ ಕಂಗನಾ ಆಸೆಯೇ ಬೇರೆ ಇತ್ತು. ಬಾಲ್ಯದಿಂದಲೇ ನಟಿಯಾಗಬೇಕೆಂಬ ಕನಸು ಕಂಡ 16 ನೇ ವಯಸ್ಸಿಗೆ ಮನೆಯಿಂದ ಓಡಿ ಬಂದು ಸ್ಟಾರ್ ನಟಿಯಾಗಿ ಬೆಳೆದುನಿಂತರು.
ಕಂಗನಾ ನಟಿಯಾಗಿರುವುದು ಮಾತ್ರವಲ್ಲದೇ ಇಂದು ಚಲನಚಿತ್ರ ನಿರ್ಮಾಪಕಿಯೂ ಹೌದು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ ತಮ್ಮ ನಿರ್ದೇಶನದ ʻಎಮರ್ಜೆನ್ಸಿʼ ಸಿನಿಮಾ ಮೂಲಕ ಮಿಂಚಲು ರೆಡಿಯಾಗಿದ್ದಾರೆ.
ಎಮರ್ಜೆನ್ಸಿʼ ಸಿನಿಮಾದಲ್ಲಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಡೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.