ಬೆಂಗಳುರು, ಮಾ 24(DaijiworldNews/AK):ಕನ್ನಡದ ಸ್ಟಾರ್ ನಟ ಪುನೀತ್ ರಾಜ್ಕುಮಾರ್ಗೆ ನಟಿಯಾಗಿ ರಣವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಯಾಗಿದ್ದ ತೆಲುಗು ನಟಿ ಅಂಜಲಿ ಇದೀಗ ಮದುವೆಯ ಬಗ್ಗೆ ಸುದ್ದಿ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸದ್ದಿಲ್ಲದೇ ನಟಿ ಅಂಜಲಿ ಮದುವೆ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಒಂದು ಮದುವೆ ಆಗಿ ಡಿವೋರ್ಸ್ ಆಗಿರುವ ತೆಲುಗು ನಿರ್ಮಾಪಕರೊಬ್ಬರನ್ನು ನಟಿ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರ ಜೊತೆ ನಟಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ನಿಜನಾ ಎಂಬುದರ ಬಗ್ಗೆ ಅಂಜಲಿ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಕೆಲ ವರ್ಷಗಳಿಂದ ತೆಲುಗು ನಿರ್ಮಾಪಕನ ಜೊತೆ ಅಂಜಲಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗ ಮದುವೆ ಮಾತುಕತೆಯಾಗಿದ್ದು, ಎರಡು ಕುಟುಂಬದ ಸಮ್ಮತಿ ಕೂಡ ಸಿಕ್ಕಿದೆ. ಹಾಗಾಗಿ ಮದುವೆ ದಿನಾಂಕ ಕೂಡ ನಿಗದಿಯಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.‘ರಣವಿಕ್ರಮ’ ಚಿತ್ರದ ಬಳಿಕ ಬೈರಾಗಿ ಚಿತ್ರದಲ್ಲಿ ಶಿವರಾಜ್ಕುಮಾರ್ಗೆ ನಟಿ ಅಂಜಲಿ ನಾಯಕಿಯಾಗಿ ನಟಿಸಿದ್ದರು.