ಮುಂಬೈ, ಮಾ 31(DaijiworldNews/AA): ಸೌತ್ ನ ಬಹು ಬೇಡಿಕೆಯ ನಟಿ ಸಮಂತಾ ರುತ್ ಪ್ರಭು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದು, ತೆಲುಗಿನ ಸಿನಿಮಾಗಳಿಗೆ ಗುಡ್ ಬೈ ಹೇಳಿ, ಬಾಲಿವುಡ್ ನಲ್ಲಿಯೇ ಸೆಟಲ್ ಆಗಲು ನಿರ್ಧರಿಸಿದ್ದಾರೆ.
ನಟಿ ಸಮಂತಾ ನಟನೆಯ 'ಹನಿ ಬನಿ' ಪ್ರಾಜೆಕ್ಟ್ ಒಟಿಟಿಯಲ್ಲಿ ಬಿಡುಗೊಡೆಗೊಳ್ಳಲು ಸಜ್ಜಾಗಿದೆ. ಬಾಲಿವುಡ್ ನಲ್ಲಿ ಇದು ಸಮಂತಾ ಅವರ ಮೊದಲ ಪ್ರಾಜೆಕ್ಟ್ ಆಗಿರುವುದರಿಂದ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಸಮಂತಾ ಅವರಿಗೆ ಇತ್ತೀಚೆಗೆ ತೆಲುಗಿನಲ್ಲಿ ಆಫರ್ ಗಳು ಕಡಿಮೆಯಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಮಧ್ಯೆ ಸಮಂತಾ ಮುಂಬೈನಲ್ಲೇ ನೆಲೆಯೂರಲು ನಿರ್ಧರಿಸಿದ್ದಾರಂತೆ. 'ಹನಿ ಬನಿ' ಪ್ರಾಜೆಕ್ಟ್ ಬಳಿಕ ಹಿಂದಿ ಸಿನಿಮಾಗೆ ಹೆಚ್ಚಿನ ಆದ್ಯತೆ ನೀಡಲು ನಟಿ ಯೋಚಿಸಿದ್ದಾರೆ ಎನ್ನಲಾಗುತ್ತಿದೆ.