ಮುಂಬೈ, ಏ. 01 (DaijiworldNews/AK): ಕರಾವಳಿ ಬೆಡಗಿ ಪೂಜಾ ಹೆಗ್ಡೆಮೊದಲ ಬಾರಿಗೆ ಬಾಯ್ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ. ಗೆಳೆಯನ ಜೊತೆ ಕಾರಿನಲ್ಲಿ ಕುಳಿತು ಹೋಗುವಾಗ ಕ್ಯಾಮೆರಾ ಕಣ್ಣಿಗೆ ನಟಿ ಸೆರೆಯಾಗಿದ್ದಾರೆ.
ಈ ಹಿಂದೆ ಪೂಜಾ ಹೆಗ್ಡೆ ಹೆಸರು ಸಾಕಷ್ಟು ನಟರ ಜೊತೆ ತಳುಕು ಹಾಕಿತ್ತು. ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಪೂಜಾ ಎಂದು ಸುದ್ದಿಯಾಗಿತ್ತು. ಬಳಿಕ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಸಿಕ್ಕಿತ್ತು.
ಇದೀಗ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಹೋಟೆಲ್ನಿಂದ ಹೊರಬಂದು ಕಾರಿನಲ್ಲಿ ರೋಹನ್ ಮೆಹ್ರಾ ಜೊತೆ ತೆರಳುವಾಗ ಕ್ಯಾಮೆರಾ ಕಣ್ಣಿನಲ್ಲಿ ಪೂಜಾ ಸೆರೆಯಾಗಿದ್ದಾರೆ. ಕ್ಯಾಮೆರಾ ಕಾಣಿಸುತ್ತಿದ್ದಂತೆ ಸರಿಯಾಗಿ ಮುಖ ತೋರಿಸದೇ ಕುಳಿತಿದ್ದಾರೆ. ನಟಿಯ ಈ ನಡೆ ಡೇಟಿಂಗ್ ಸುದ್ದಿಗೆ ಮತ್ತಷ್ಟು ಇಂಬು ಸಿಕ್ಕಾಂತಾಗಿದೆ.