ಮುಂಬೈ, ಜೂ.30(DaijiworldNews/AA): ಕೆಲ ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಅವರು ಪ್ರೆಗ್ನೆಂಟ್ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸದ್ಯದಲ್ಲೇ ಪ್ರೆಗ್ನೆನ್ಸಿ ಸುದ್ದಿ ಘೋಷಣೆ ಮಾಡುತ್ತಾರೆ ಎನ್ನಲಾಗಿದೆ.
ಹೌದು ಸೋನಾಕ್ಷಿ ಸಿನ್ಹಾ ಅವರು ಮದುವೆಯಾದ ಒಂದೇ ವಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಪ್ರೆಗ್ನೆನ್ಸಿ ಚರ್ಚೆ ಶುರುವಾಗಿದ್ದು, ಅದರಂತೆ ಸೋನಾಕ್ಷಿ, ಮತ್ತು ಝಹೀರ್ ಜೋಡಿ ಗುಡ್ ನ್ಯೂಸ್ ಕೊಡ್ತಾರಾ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.
ಇನ್ನು ಸೋನಾಕ್ಷಿ, ಮತ್ತು ಝಹೀರ್ ಜೋಡಿ ಜೂನ್ 23ರಂದು ಮದುವೆಯಾಗಿದ್ದರು. ಇವರ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು. ಪ್ರೆಗ್ನೆಂಟ್ ಆದ ಕಾರಣದಿಂದಲೇ ನಟಿ ತರಾತುರಿಯಲ್ಲಿ ಮದುವೆಯಾದ್ರಾ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ. ಇದೀಗ ಸೋನಾಕ್ಷಿ ಹಾಗೂ ಝಹೀರ್ ದಂಪತಿ ಅವರೇ ಈ ವದಂತಿಗೆ ಉತ್ತರಿಸಬೇಕಿದೆ.