ಚೆನ್ನೈ, ಜು.01(DaijiworldNews/AA): ತಮಿಳಿನ ಖ್ಯಾತ ನಟಿ ವರಲಕ್ಷ್ಮಿ ಶರತ್ಕುಮಾರ್ ಬಹುಕಾಲದ ಗೆಳೆಯನ ಜೊತೆ ಜುಲೈ 2ರಂದು ಸಪ್ತಪದಿ ತುಳಿಯಲಿದ್ದಾರೆ. ಇವರಿಬ್ಬರ ವಿವಾಹವು ಥೈಲ್ಯಾಂಡ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಹಿರಿಯ ನಟ ಶರತ್ಕುಮಾರ್ ಮತ್ತು ರಾಧಿಕಾ ದಂಪತಿ ಪುತ್ರಿ ವರಲಕ್ಷ್ಮಿ ಅವರ ವಿವಾಹವು ಉದ್ಯಮಿ ನಿಕೋಲಾಯ್ ಜೊತೆಗೆ ನಡೆಯಲಿದೆ. ಥೈಲ್ಯಾಂಡ್ನಲ್ಲಿ ನಡೆಯುವ ಈ ಜೋಡಿಯ ವಿವಾಹಕ್ಕೆ ತಮಿಳಿನ ಸ್ಟಾರ್ ಕಲಾವಿದರು ಆಗಮಿಸಲಿದ್ದಾರೆ. ವಿವಾಹ ಪೂರ್ವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿದ್ದು, ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ.
ಈ ಮದುವೆ ಸಂಭ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ವರಲಕ್ಮ್ಷಿ ಹಾಗೂ ನಿಕೋಲಾಯ್ ಜೋಡಿ ಇದೀಗ ಒಂದಾಗುತ್ತಿದ್ದಾರೆ.