ಬೆಂಗಳೂರು, ಜು.02(DaijiworldNews/AA): ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭುವನ್ ಮತ್ತು ಹರ್ಷಿಕಾ ಜೋಡಿ ಇದೀಗ ಕೊಡವ ಸಂಪ್ರದಾಯದ ಉಡುಗೆಯಲ್ಲೇ ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಪ್ರೆಗ್ನೆನ್ಸಿ ರಿವೀಲ್ ಮಾಡಿದ್ದಾರೆ.
ಇದೇ ಅಕ್ಟೋಬರ್ನಲ್ಲಿ ಮಗು ಬರಲಿರುವ ಸಂತಸದಲ್ಲಿದ್ದಾರೆ ಹರ್ಷಿಕಾ ದಂಪತಿ. ಬಹುಕಾಲದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಕಳೆದ ವರ್ಷ ಆಗಸ್ಟ್ 24ರಂದು ಕೊಡಗಿನಲ್ಲಿ ಅವರ ಸಂಪ್ರದಾಯದಂತೆ ವಿವಾಹವಾಗಿದ್ದರು.
ಕೊಡವ ಸಂಪ್ರದಾಯದ ಹಳ್ಳಿ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭುವನ್ ಮತ್ತು ಹರ್ಷಿಕಾ ದಂಪತಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ಈ ಜೋಡಿಯೊಂದಿಗೆ ಇಡೀ ಕುಟುಂಬ ಅದೇ ಶೈಲಿಯಲ್ಲೇ ಕಂಗೊಳಿಸಿದೆ. ಇದರಲ್ಲಿ ಕಪ್ಪು ಮಿಶ್ರಿತ ಬ್ರೌನ್ ಕಲರ್ ಕೊಡವ ಶೈಲಿಯ ಸೀರೆ ಧರಿಸಿದ್ದು, ಭುವನ್ ಪೊನ್ನಣ್ಣ ಕೊಡವ ಸಂಪ್ರದಾಯದ ಕಪ್ಪು ಕೋಟ್ ಧರಿಸಿ-ತಲೆಗೆ ಪೇಟಾ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ನಿಂತಿದ್ದಾರೆ. ಹರ್ಷಿಕಾ ಹಾಗೂ ಭುವನ್ ದಂಪತಿ ತಮ್ಮ ಜೀವನಕ್ಕೆ ಹೊಸ ಸದಸ್ಯನ ಆಗಮನದ ಖುಷಿಯಲ್ಲಿದೆ.