ಬೆಂಗಳೂರು, ಜು.06(DaijiworldNews/AA): ನಟ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ 'ಮ್ಯಾಕ್ಸ್' ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಸುದೀಪ್ ಮುಂದಿನ ಸಿನಿಮಾಗಾಗಿ ಭಾರೀ ವರ್ಕೌಟ್ ನಡೆಸುತ್ತಿದ್ದಾರೆ.
ಸುದೀಪ್ ಅವರ ಮುಂದಿನ ಸಿನಿಮಾ ಬಿಲ್ಲಾ ರಂಗ ಭಾಷಾಗಾಗಿ ಭಾರೀ ತಪಾರಿ ನಡೆಸುತ್ತಿರುವ ಅವರು, ಈ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಸುದೀಪ್ ನಟಿಸಲಿದ್ದಾರೆ. ಒಂದೊಂದು ಪಾತ್ರಕ್ಕೆ ಒಂದೊಂದು ರೀತಿ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿರುವ ಒಂದು ಪಾತ್ರದಲ್ಲಿ ಅವರು ಭಾರಿ ಕಟ್ಟುಮಸ್ತಾದ ದೇಹವನ್ನು ಹೊಂದಿದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಸುದೀಪ್ ಸಖತ್ ವರ್ಕೌಟ್ ನಡೆಸುತ್ತಿದ್ದಾರೆ.
ಇನ್ನು ಸುದೀಪ್ ಅವರ ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮ್ಯಾಕ್ಸ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗುವ ಮುನ್ನವೇ 'ಬಿಲ್ಲಾ ರಂಗ ಭಾಷಾ' ಸಿನಿಮಾಕ್ಕೆ ರೆಡಿಯಾಗುತ್ತಿದ್ದಾರೆ.