ಬೆಂಗಳೂರು, ಜು. 07(DaijiworldNews/AA): ಕನ್ನಡದ ಬೆಡಗಿ ನಟಿ ಶ್ರೀಲೀಲಾ ಅವರು ಟಾಲಿವುಡ್ನ ಬಹುಬೇಡಿಕೆಯ ನಟಿಯಾಗಿದ್ದು, ಇದೀಗ ಸೂಪರ್ ಸ್ಟಾರ್ ಬಾಲಯ್ಯ ಪುತ್ರನಿಗೆ ನಾಯಕ ನಟಿಯಾಗಿ ಆಯ್ಕೆ ಆಗಿದ್ದಾರೆ.
ಶ್ರೀಲೀಲಾಗೆ ತೆಗುಗಿನಲ್ಲಿ ಅಷ್ಟೇ ಅಲ್ಲದೇ ತಮಿಳು ಹಾಗು ಹಿಂದಿ ಸಿನಿಮಾಗಳಲ್ಲೂ ಬಂಪರ್ ಆಫರ್ ಬಂದಿದೆ. ಬಾಲಯ್ಯ ಪುತ್ರ ಮೋಕ್ಷಜ್ಞ ಅವರ ಚೊಚ್ಚಲ ಚಿತ್ರಕ್ಕೆ ನಟಿ ಶ್ರೀಲೀಲಾ ಅವರೇ ಸೂಕ್ತ ಎಂದು ಅವರನ್ನು ಆಯ್ಕೆ ಮಾಡಲಾಗಿದೆ.
'ಭಗವಂತ ಕೇಸರಿ' ಸಿನಿಮಾದಲ್ಲಿ ಶ್ರೀಲೀಲಾ ಅವರು ಬಾಲಯ್ಯ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿಯ ನಟನೆಯ ಮೇಲಿರುವ ಶ್ರದ್ಧೆ ನೋಡಿ ಈಕೆಯೇ ಸೂಕ್ತ ಎಂದು ಮಗನ ಚಿತ್ರಕ್ಕೆ ನಾಯಕಿಯಾಗಿ ಬಾಲಯ್ಯ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಬೇಕಿದೆ ಎನ್ನಲಾಗಿದೆ.
ಬಾಲಯ್ಯ ಪುತ್ರ ಮೋಕ್ಷಜ್ಞ ನಾಯಕ ನಟನಾಗಿ ಮಿಂಚಲು ಎಲ್ಲಾ ತಯಾರಿ ಮಾಡಿಕೊಂಡೇ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಮೋಕ್ಷಜ್ಞ ಅವರ ಚೊಚ್ಚಲ ಸಿನಿಮಾ ಆಗಿರುವ ಕಾರಣ ಉತ್ತಮ ಕಥೆಯೊಂದಿಗೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯಡಿ ಅವರು ಲಾಂಚ್ ಆಗ್ತಿದ್ದಾರೆ.