ಖಾರ್ಟೂಮ್, ಆಗಸ್ಟ್ 17, (DaijiworldNews/TA) : ಮಧ್ಯ ಸುಡಾನ್ನ ಸಿನ್ನಾರ್ ರಾಜ್ಯದ ಹಳ್ಳಿಯೊಂದರ ಮೇಲೆ ಅರೆಸೇನಾ ಪಡೆಗಳು ದಾಳಿ ನಡೆಸಿದ ಪರಿಣಾಮ 80 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಐದು ದಿನಗಳ ಮುತ್ತಿಗೆಯ ನಂತರ ಸಿನ್ನಾರ್ ರಾಜ್ಯದ ಜಲ್ಕ್ನಿ ಗ್ರಾಮದ ಮೇಲೆ ಆರ್ಎಸ್ಎಫ್ ದಾಳಿ ನಡೆಸಿದೆ ಎಂಬಬುವುದು ವರದಿಯಾಗಿದೆ. ಗ್ರಾಮದಿಂದ ಯುವತಿಯರನ್ನು ಅಪಹರಿಸಲು ಆರ್ಎಸ್ಎಫ್ ಯತ್ನ ಮಾಡಿತ್ತು, ಇದಕ್ಕೆ ನಿವಾಸಿಗಳು ವಿರೋಧಿಸಿದಾಗ ಅವರ ಮೇಲೆ ದಾಳಿ ನಡೆಸಲಾಗಿದೆ. ಪರಿಣಾಮ 80 ಜನ ಸಾವಿಗೀಡಾಗಿದ್ದಾರೆ ಎಂದು ಸಿನ್ನಾರ್ ಯೂತ್ ಗ್ಯಾದರಿಂಗ್ ವರದಿ ನೀಡಿದೆ.
ಜೂನ್ನಿಂದಲೂ, ರಾಜಧಾನಿ ಸಿಂಗಾ ಸೇರಿದಂತೆ ಸಿನ್ನಾರ್ ರಾಜ್ಯದ ಹೆಚ್ಚಿನ ಭಾಗಗಳನ್ನು ಆರ್ಎಸ್ಎಫ್ ನಿಯಂತ್ರಣದಲ್ಲಿದೆ. ಇನ್ನೂ ಸುಡಾನ್ನ ಸಶಸ್ತ್ರ ಪಡೆಗಳು (ಎಸ್ಎಎಫ್) ಪೂರ್ವ ಸಿನ್ನಾರ್ ಪ್ರದೇಶವನ್ನು ನಿಯಂತ್ರಿಸುತ್ತದೆ ಎಂದು ಮಾಹಿತಿ ಇದೆ.
ಏ.15, 2023 ರಿಂದ ಸುಡಾನ್ನಲ್ಲಿ ಸೇನೆ ಹಾಗೂ ಆರೆಸೇನಾ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಈ ಸಂಘರ್ಷ 16,650 ಜೀವಗಳನ್ನು ಬಲಿಪಡೆದಿದೆ ಎಂಬುವುದು ವರದಿ ಮೂಲಕ ತಿಳಿದು ಬಂದಿದೆ.