ಮಾಸ್ಕೊ, ಆ.18 (DaijiworldNews/AK) :ರಷ್ಯಾದ ಕ್ಯಾಂಚಟ್ಕಿ ಪ್ರಾಂತ್ಯದ ಪೂರ್ವ ಕರಾವಳಿಯಲ್ಲಿ ಶನಿವಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ.
ಕ್ಯಾಂಚಟ್ಕಿ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿರುವ ಬಗ್ಗೆ ಯುರೋ ಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಇಲ್ಲಿನ ಕರಾವಳಿಯ ತೀರದಲ್ಲಿ ಭೂಮಿಯಿಂದ 30 ಕಿ.ಮೀ . ಒಳಗೆ ಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ.
ಭೂಕಂಪದಿಂದ ಸುನಾಮಿ ಸಂಭವಿಸಬಹುದು ಎಂದು ಅಮೆರಿಕದ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ಮುನ್ಸೂಚನೆ ನೀಡಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋ ವು ಸಂಭವಿಸಿಲ್ಲ ಎಂದು ವರದಿಯಾಗಿದೆ.