ಚೀನಾ, ಆ.19 (DaijiworldNews/TA) : ಫಿಲಿಪೈನ್ಸ್ ನೌಕೆಯು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅಪಾಯಕಾರಿ ರೀತಿಯಲ್ಲಿ ಚೀನಾದ ಹಡಗಿನೊಂದಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಚೀನಾದ ಕೋಸ್ಟ್ ಗಾರ್ಡ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾ ಫಿಲಿಪೈನ್ ಮೇಲೆ ಮತ್ತೊಂದು ಆರೋಪ ಮಾಡುತ್ತಿದೆ. ಈ ಕುರಿತು ಚೈನಾ ಕೋಸ್ಟ್ ಗಾರ್ಡ್ನ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ವೀಡಿಯೋ ಮೂಲಕ ಸಮರ್ಥಿಸಿಕೊಂಡಿದೆ.
ಚೀನಾ ಕೋಸ್ಟ್ ಗಾರ್ಡ್ ವಕ್ತಾರ ಗಾನ್ ಯು ಹೇಳಿಕೆ ನೀಡಿದ ಪ್ರಕಾರ, ಸೋಮವಾರ ಮುಂಜಾನೆ ಎರಡು ಫಿಲಿಪೈನ್ ಕೋಸ್ಟ್ ಗಾರ್ಡ್ ಹಡಗುಗಳು ಸಬೀನಾ ಶೋಲ್ ಪಕ್ಕದ ನೀರಿನಲ್ಲಿ ಅನುಮತಿಯಿಲ್ಲದೆ "ಕಾನೂನುಬಾಹಿರವಾಗಿ ಒಳನುಗ್ಗಿದವು.
ಕಾನೂನಿಗೆ ಅನುಸಾರವಾಗಿ ಫಿಲಿಪೈನ್ ಹಡಗುಗಳ ವಿರುದ್ಧ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಚೀನಾದ ಕೋಸ್ಟ್ ಗಾರ್ಡ್ ಹೇಳಿದೆ. ಅಲ್ಲದೇ ಇದೇ ವೇಳೆ ತಕ್ಷಣ ಕಾನೂನು ಉಲ್ಲಂಘನೆ ಮತ್ತು ವಿರೋದಾತ್ಮಕ ಭಾವನೆ ನಿಲ್ಲಿಸಿ" ಇಲ್ಲವೇ "ಎಲ್ಲಾ ಪರಿಣಾಮಗಳಿಗೂ ನೀವೇ ಹೊಣೆಯಾಗುವಿರಿ ಎಂದು ಫಿಲಿಪೈನ್ಸ್ಗೆ ಚೀನಾ ಎಚ್ಚರಿಕೆ ನೀಡಿದೆ.
25 ವರ್ಷಗಳ ಹಿಂದೆ ಉದ್ದೇಶಪೂರ್ವಕವಾಗಿ ನೆಲಸಮಗೊಳಿಸಿದ ನೌಕಾಪಡೆಯ ಹಡಗಿನಲ್ಲಿ ಸೈನ್ಯವನ್ನು ಮರುಪೂರೈಸಲು ಫಿಲಿಪೈನ್ಸ್ ಪ್ರಯತ್ನಗಳನ್ನು ತಡೆಯುವಲ್ಲಿ ಆಕ್ರಮಣಶೀಲತೆಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಚೀನಾವನ್ನು ತೀವ್ರವಾಗಿ ಟೀಕಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಉದ್ದೇಶ ಪೂರ್ವಕ ಹಡಗು ಡಿಕ್ಕಿ ವಿಚಾರ ಬೆಳಕಿಗೆ ಬಂದಿದೆ.