ವಾಸಾ,ಆ.21(DaijiworldNews/AK): ಉಕ್ರೇನ್ ಭೇಟಿಗೂ ಒಂದು ದಿನ ಮುನ್ನ ಪೋಲೆಂಡ್ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಶಾಂತಿಯನ್ನು ಬೆಂಬಲಿಸುತ್ತದೆ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಯಾವುದೇ ಸಂಘರ್ಷವನ್ನು ಪರಿಹರಿಸಬಹುದು. ಇದು ಯುದ್ಧದಯುಗವಲ್ಲ ಎಂದು
ಹೇಳಿದರು.
ವಾಸಾದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇ ಶಿಸಿ ಮಾತನಾಡಿದ ಅವರು, ಎಲ್ಲಾ ದೇ ಶಗಳಿಂದ ಅಂತರಕಾಯ್ದುಕೊಳ್ಳಬೇಕು ಎನ್ನುವುದು ಭಾರತ ದಶಕಗಳಿಂದ ಪಾಲಿಸಿಕೊಂಡು ಬಂದ ನೀತಿ. ಆದರೆ ಎಲ್ಲಾ ದೇ ಶಗಳಿಗೆ ಹತ್ತಿರವಾಗುವುದು ಇಂದಿನ ಭಾರತದ ನೀತಿ ಎಂದು ಹೇಳಿದರು.
ಭಾರತವು ಭಗವಾನ್ ಬುದ್ಧನ ಪರಂಪರೆಯ ಭೂಮಿಯಾಗಿದೆ. ಈ ಪ್ರದೇ ಶದಲ್ಲಿ ಶಾಂತಿಯನ್ನು ಬಯಸುತ್ತದೆ. ಸಂಘರ್ಷ ವನ್ನು ಪರಿಹರಿಸಿ ಶಾಂತಿ ಸ್ಥಾಪನೆಗೆ ಮಾತುಕತೆ ಮತ್ತು ರಾಜತಾಂ ತ್ರಿಕತೆಯೇ ಉತ್ತಮಮಾರ್ಗ ಎಂದು ಭಾರತ ನಂ ಬುತ್ತದೆ ಎಂದರು.
ಮೋ ದಿ ಅವರು ನಾಳೆ (ಆ.23) ಉಕ್ರೇ ನ್ ರಾಜಧಾನಿ ಕೀ ವ್ಗೆ ಭೇಟಿ ನೀ ಡಲಿದ್ದಾರೆ. ಉಕ್ರೇ ನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಹ್ವಾನದ ಮೇ ರೆಗೆ ಉಕ್ರೇನ್ ಭೇ ಟಿ ನೀಡುತ್ತಿರುವ ಮೋ ದಿ, ನಡೆಯುತ್ತಿರುವ ಸಂಘರ್ಷ ದ ಶಾಂತಿಯುತ ಪರಿಹಾರದ ಕುರಿತು ಮಾತುಕತೆ ನಡೆಸಲಿದ್ದಾರೆ.