ವಾಷಿಂಗ್ಟನ್, ಸೆ.1(DaijiworldNews/AA): ನಿಯಮ ಉಲ್ಲಂಘಿಸಿ ಅರ್ಲಿಂಗ್ಟನ್ ರಾಷ್ಟ್ರೀಯ ಸಮಾಧಿಯಲ್ಲಿ ಛಾಯಾಚಿತ್ರಗಳನ್ನು ತೆಗೆದು ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅವರು ಅಗೌರವ ತೋರಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 'ಅರ್ಲಿಂಗ್ಟನ್ ರಾಷ್ಟ್ರೀಯ ಸಮಾಧಿಯು ಅಮೆರಿಕದ ವೀರರನ್ನು ಗೌರವಿಸಲು ಇರುವ ಸ್ಥಳವಾಗಿದ್ದು, ರಾಜಕೀಯಕ್ಕೆ ಮೀಸಲಿಟ್ಟ ಸ್ಥಳವಲ್ಲ. ರಾಜಕೀಯ ಲಾಭಗೋಸ್ಕರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪವಿತ್ರ ಭೂಮಿಗೆ ಅಗೌರವ ತೋರಿದ್ದಾರೆ' ಎಂದು ಆರೋಪಿಸಿದ್ದಾರೆ.
ಅರ್ಲಿಂಗ್ಟನ್ ರಾಷ್ಟ್ರೀಯ ಸಮಾಧಿಗೆ ಡೊನಾಲ್ಡ್ ಟ್ರಂಪ್ ಅವರು ಭೇಟಿ ನೀಡಿದ್ದ ವೇಳೆ ಛಾಯಾಚಿತ್ರಗಳನ್ನು ತೆಗೆಯದಂತೆ ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ಸಹಾಯಕರಿಗೆ ಎಚ್ಚರಿಸಲಾಗಿತ್ತು. ಆದರೂ ನಿಯಮ ಉಲ್ಲಂಘಿಸಿ ಸಮಾಧಿಯ ಫೋಟೊ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದೀಗ ಈ ಘಟನೆಯೇ ವಾಗ್ವಾದಕ್ಕೆ ಕಾರಣವಾಗಿದೆ ಎಂದು ರಾಷ್ಟ್ರೀಯ ಸಮಾಧಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.