ವಾಷಿಂಗ್ಟನ್, ಸೆ.14 (DaijiworldNews/AK): ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋ ರ್ ಅವರು ಬಾಹ್ಯಾಕಾಶದಿಂದಲೇ ನವೆಂಬರ್ 5 ರಂದು ನಡೆಯುವ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ಯೋಜಿಸಿದ್ದಾರೆ ಎಂದು ಹೇಳಿದರು.
ಶುಕ್ರವಾರ ತಡರಾತ್ರಿ ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ, ಇದು ನಾಗರಿಕರಾಗಿ ನಾವು ಹೊಂದಿರುವ ಅತ್ಯಂತ ಪ್ರಮುಖ ಕರ್ತವ್ಯವಾಗಿದೆ ಮತ್ತು [ನಾನು] ಸಾಕಷ್ಟು ತಂಪಾಗಿರುವ ಬಾಹ್ಯಾಕಾಶದಿಂದ ಮತ ಚಲಾಯಿಸಲು ಎದುರು ನೋಡುತ್ತಿದ್ದೇನೆ" ಎಂದು ವಿಲಿಯಮ್ಸ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸ್ಟಾರ್ಲೈನರ್ ನಿರ್ಗಮಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇದು ಪರೀಕ್ಷಾರ್ಥ ಹಾರಾಟ ಎಂದು ತನಗೆ ಮತ್ತು ಬುಚ್ಗೆ ತಿಳಿದಿತ್ತು ಮತ್ತು ಇದು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂಬ ಆಲೋಚನೆಯೂ ನಮಗೆ ಇತ್ತು “ನಾವು ಹೆಚ್ಚು ಸಮಯದವರೆಗೆ ಇಲ್ಲಿ ಉಳಿಯಬೇಕಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ ಮನೆಯವರ ಜೊತೆ ಇರಬೇಕಿತ್ತು ಅದೂ ವಿಶೇಷವಾಗಿ ನನ್ನ ತಾಯಿಯ ಜೊತೆ ಇರಬೇಕಿತ್ತು ಆದರೆ ಕಾರಣಾಂತರಗಳಿಂದ ಸ್ವಲ್ಪ ತಡವಾಗುತ್ತಿದೆ ಕೆಲವೊಂದು ಯೋಜನೆಗಳನ್ನು ಹಾಕಿದ್ದೆ ಆದರೆ ಅದು ಸದ್ಯಕ್ಕೆ ದೂರವಾದ ಮಾತು ಎಂದು ಸುನೀತಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ.
ನಾವು ಎಲ್ಲಾ ರೀತಿಯ ತೊಂದರೆಗಳನ್ನು ಎದುರಿಸುತ್ತೇ ವೆ, ಅದು ಎಂಟು ದಿನಗಳು ಆಗಿರಬಹುದು ಅಥವಾ ಎಂಟು ತಿಂಗಳುಗಳು ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇ ವೆ ಎಂದು ಬುಚ್ ವಿಲ್ಮೋ ರ್ ಹೇಳಿದ್ದಾರೆ.