ಕೊಲಂಬೊ, ಸೆ.21 (DaijiworldNews/AK): ಲಂಕಾದ ನಿರ್ಣಾಯಕ ಅಧ್ಯಕ್ಷೀಯ ಚುನಾವಣೆಯಲ್ಲಿ( ಇಂದು ) ಶನಿವಾರ ಮತದಾನ ಪ್ರಾರಂಭವಾಗಿದೆ. -- 2022 ರಲ್ಲಿ ಆರ್ಥಿಕ ಕುಸಿತದ ನಂತರ ದ್ವೀಪ ರಾಷ್ಟ್ರದ ಮೊದಲ ಪ್ರಮುಖ ಚುನಾವಣಾಯಾಗಿದೆ.
13,400 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಸುಮಾರು 1.70 ಲಕ್ಷ ಜನರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕಿಯೆ ಆರಂಭವಾಗಿದ್ದು, ಸಂಜೆ 5ರವರೆಗೆ ನಡೆಯಲಿದೆ. ಭಾನುವಾರ ಫಲಿತಾಂಶ ಪ್ರಕಟವಾಗಲಿದೆ.
ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮ್ಸಿಂಘೆ ಅವರು ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಎದುರಾಳಿಗಳಾಗಿ ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ಪಕ್ಷದ ಅಧ್ಯಕ್ಷ ಅನುರಕುಮಾರ ದಿಸನಾಯಕೆ ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕ, ಸಮಾಗಿ ಜನ ಬಲವೆಗಯ ಪಕ್ಷದ ಸಜಿತ್ ಪ್ರೇಮದಾಸ ಅವರು ಸ್ಪರ್ಧಿ ಸಿದ್ದಾರೆ.