ದುಬೈ, ಸೆ.22(DaijiworldNews/AK): ಇರಾನ್ ದಕ್ಷಿಣ ಖೊರಾಸಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸೋರಿಕೆಯಿಂದಾಗಿ ಸ್ಫೋ ಟ ಸಂಭವಿಸಿದ್ದು, ಕನಿಷ್ಠ 19 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅವಘಡದಲ್ಲಿ 17 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ 30 ಮಂದಿ ಗಣಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಮದಂಜೂ ಕಂಪನಿ ನಡೆಸುತ್ತಿರುವ ಗಣಿ ‘ಬಿ’ ಮತ್ತು ‘ಸಿ’ ಬ್ಲಾಕ್ಗಳಲ್ಲಿ ಮೀಥೇನ್ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿದೆ. ಎರಡು ಬ್ಲಾಕ್ನಲ್ಲಿ ಒಟ್ಟು 69 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.