ಜಪಾನ್,ಸೆ.27(DaijiworldNews/TA):ಜಪಾನ್ನ ಮುಂದಿನ ಪ್ರಧಾನಿಯಾಗಿ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಆಯ್ಕೆಯಾಗಿದ್ದಾರೆ.
ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲು ಒಂಬತ್ತು ಅಭ್ಯರ್ಥಿಗಳ ನಡುವೆ ನಡೆದ ಪೈಪೋಟಿಯಲ್ಲಿ ಶಿಗೆರು ಅವರು ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್ 1 ರಂದು ಇಶಿಬಾ ಜಪಾನ್ನ 102 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ, ಅದೇ ದಿನ ಫ್ಯೂಮಿಯೊ ಕಿಶಿಡಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ವರದಿಯಾಗಿದೆ.
ಜಪಾನ್ನ ಮೊದಲ ಮಹಿಳಾ ನಾಯಕಿಯಾಗಲು ಸ್ಪರ್ಧಿಸುತ್ತಿದ್ದ ಆರ್ಥಿಕ ಭದ್ರತಾ ಸಚಿವೆ ಸಾನೆ ತಕೈಚಿ ಅವರನ್ನು ಸೋಲಿಸಿ ಇಶಿಬಾ ಒಟ್ಟು 215 ಮತಗಳನ್ನು ಪಡೆದಿದ್ದಾರೆ. ಪ್ರಸ್ತುತ ಪ್ರಧಾನಿ ಫ್ಯೂಮಿಯೊ ಕಿಶಿಡಾ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಕೆಳಮನೆಯ ಪ್ರಸ್ತುತ ಅಧಿಕಾರಾವಧಿಯು ಅಕ್ಟೋಬರ್ 2025 ರವರೆಗೆ ಇರಲಿದೆ. ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಜಪಾನ್ 190 ದೇಶಗಳಲ್ಲಿ 163 ನೇ ಸ್ಥಾನದಲ್ಲಿದೆ.