ವಾಷಿಂಗ್ಟನ್,ಸೆ.28(DaijiworldNews/TA):ಹೆಲೆನ್ ಚಂಡಮಾರುತದಿಂದ ಸಾವನ್ನಪ್ಪಿದವರ ಸಂಖ್ಯೆ 33ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದಿಂದ ಫ್ಲೋರಿಡಾ ರಾಜ್ಯದ ರಾಜಧಾನಿ ತಲ್ಲಾಹಸ್ಸೀ ಬಳಿ ಭೂಕುಸಿತ ಉಂಟಾಗಿದೆ.
ಶುಕ್ರವಾರದ ಅಸೋಸಿಯೇಟೆಡ್ ಪ್ರೆಸ್ನ ವರದಿಯ ಪ್ರಕಾರ, ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 17 ಜನರ ಸಾವು ಸೇರಿದಂತೆ ಫ್ಲೋರಿಡಾ, ಜಾರ್ಜಿಯಾ, ದಕ್ಷಿಣ ಕೆರೊಲಿನಾ ಮತ್ತು ಉತ್ತರ ಕೆರೊಲಿನಾದಲ್ಲಿ ಸಾವಿನ ಸಂಖ್ಯೆ ಕನಿಷ್ಠ 35 ಕ್ಕೆ ತಲುಪಿದೆ.
ಜಾರ್ಜಿಯಾದಲ್ಲಿ, ಸುಮಾರು 115 ಕಟ್ಟಡಗಳು ಧ್ವಂಸಗೊಂಡಿದೆ. ಅಧಿಕಾರಿಗಳು ಒಳಗೆ ಸಿಲುಕಿರುವವರನ್ನು ರಕ್ಷಿಸಲು ಧಾವಿಸಿದ್ದಾರೆ. ಹೆಚ್ಚುತ್ತಿರುವ ಪ್ರವಾಹದಿಂದಾಗಿ 50 ಟೆನ್ನೆಸ್ಸೀ ನಾಗರಿಕರು ಯುನಿಕೋಯ್ ಕೌಂಟಿ ಆಸ್ಪತ್ರೆಯ ಛಾವಣಿಯ ಮೇಲೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಕೆರೊಲಿನಾದಲ್ಲಿ, ತೀವ್ರ ಪ್ರವಾಹ ಮತ್ತು ಭೂಕುಸಿತದಿಂದಾಗಿ 290 ರಸ್ತೆಗಳನ್ನು ಮುಚ್ಚಲಾಗಿದೆ. ಚಂಡಮಾರುತದಿಂದಾಗಿ ರಾಜ್ಯದಲ್ಲಿ ಸುಮಾರು 30 ಇಂಚುಗಳಷ್ಟು ಮಳೆಯಾಗಿದೆ.
ಫ್ಲೋರಿಡಾ, ಜಾರ್ಜಿಯಾ, ಉತ್ತರ ಕೆರೊಲಿನಾ, ದಕ್ಷಿಣ ಕೆರೊಲಿನಾ ಮತ್ತು ಅಲಬಾಮಾದಲ್ಲಿ ತುರ್ತು ಘೋಷಣೆಗಳನ್ನು US ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ.