ಇಸ್ತಾನ್ಬುಲ್, ಸೆ.30(DaijiworldNews/AK):ತನ್ನನ್ನು ತಾನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದ ಟರ್ಕಿಶ್ ಟಿಕ್ಟಾಕ್ ಇನ್ಫ್ಲೂಯೆನ್ಸರ್ ಕುಬ್ರಾ ಆಯ್ಕುತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
26ರ ಹರೆಯದ ಈ ಯುವತಿ ಇಸ್ತಾನ್ಬುಲ್ನ ಸುಲ್ತಾನ್ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಟರ್ಕಿಶ್ ಮಾಧ್ಯಮದ ವರದಿಗಳು ಸೂಚಿಸುತ್ತವೆ. ಘಟನೆ ಸೆಪ್ಟೆಂಬರ್ 23 ರಂದು ನಡೆದಿದ್ದು, ಅಧಿಕಾರಿಗಳು ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಟಿಪ್ಪಣಿ ಪತ್ತೆಹಚ್ಚಿದ್ದಾರೆ.
ಆಕೆಯ ಆತ್ಮಹತ್ಯೆಗೆ ಕೆಲವೇ ಗಂಟೆಗಳ ಮೊದಲು, ಆಕೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತನ್ನ ತೂಕ ಕಡಿಮೆ ಆಗುತ್ತಿರುವ ಬಗ್ಗೆ, ಅದನ್ನು ನಿಯಂತ್ರಿಸಲು ತಾನು ಯಾವ ರೀತಿ ಕಷ್ಟಪಡುತ್ತಿದ್ದೇನೆ ಎಂಬುದರ ಬಗ್ಗೆ ಪೋಸ್ಟ್ ಮಾಡಿದ್ದಾರೆ.
“ನಾನು ನನ್ನಿಂದಾದ ಶಕ್ತಿ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ತೂಕ ಹೆಚ್ಚಾಗಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಪ್ರತಿದಿನ ಒಂದು ಕೆಜಿ ಕಳೆದುಕೊಳ್ಳುತ್ತಿದ್ದೇನೆ. ನನಗೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನಾನು ತುರ್ತಾಗಿ ತೂಕವನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ತಮ್ಮ ಕೊನೇ ಪೋಸ್ಟ್ ನಲ್ಲಿ ಹೇಳಿದ್ದಾರೆ.
ತನ್ನ ಕೊನೆಯ ಟಿಕ್ಟಾಕ್ ವಿಡಿಯೊದಲ್ಲಿ, ತನ್ನ ಆತ್ಮಹತ್ಯೆಗೆ ಸ್ವಲ್ಪ ಮೊದಲು, ಕುಬ್ರಾ ತನ್ನ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಳು. ಆಯ್ಕುತ್ ತನ್ನ ಟಿಕ್ಟಾಕ್ ಖಾತೆಯಲ್ಲಿ ಒಂದು ಮಿಲಿಯನ್ ಅನುಯಾಯಿಗಳನ್ನು ಮತ್ತು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2,07,000 ಅನುಯಾಯಿಗಳನ್ನು ಹೊಂದಿದ್ದಾಳೆ.