ಟೋಕಿಯೋ,ಅ. 03(DaijiworldNews/TA):ಜಪಾನ್ನ ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ ರನ್ವೇ ಬಳಿಯಲ್ಲಿ 2ನೇ ಮಹಾಯುದ್ದದ ಕಾಲದ ಬಾಂಬ್ ಸ್ಫೋಟಗೊಂಡಿದ್ದು, 87 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಬುಧವಾರ ನಡೆದ ಘಟನೆಯಿಂದಾಗಿ 87 ವಿಮಾನಗಳ ಹಾರಾಟ ರದ್ದಾಗಿದೆ. "ಕಾಮಿಕೇಜ್" ದಾಳಿಯನ್ನು ನಿಲ್ಲಿಸುವ ಪ್ರಯತ್ನಗಳ ಸಮಯದಲ್ಲಿ ಕೈಬಿಡಲಾದ ಬಾಂಬ್, ಟ್ಯಾಕ್ಸಿವೇಯ ಮಧ್ಯಭಾಗದಲ್ಲಿ 23 ಅಡಿ ಅಗಲ ಮತ್ತು 3 ಅಡಿ ಆಳದ ಕುಳಿಯನ್ನು ರಚಿಸುವ ಮೂಲಕ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಹಾನಿಯನ್ನುಂಟುಮಾಡಿದೆ. ಘಟನೆಯ ವಿವರಗಳನ್ನು ಜಪಾನ್ನ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ಯುದ್ಧ ನಡೆದ ಕಾಲದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ ಸ್ಫೋಟಗೊಳ್ಳದ ಬಾಂಬ್ಗಳನ್ನು ಬಾಂಬ್ ವಿಲೇವಾರಿ ತಂಡ ನೆಲದಲ್ಲಿ ಹೂತು ಹಾಕಿತ್ತು. ಅದು ಈಗ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.