ಇಸ್ರೇಲ್, ಅ. 04(DaijiworldNews/AK):ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಹತ್ಯೆ ನಡೆದು ವಾರ ಕಳೆದಿದೆ ಅಷ್ಟೇ ನೂತನ ಮುಖ್ಯಸ್ಥ ಹಾಶೆಂ ಸೈಫೆದ್ದೀನ್ನನ್ನು ಇಸ್ರೇಲ್ ಹತ್ಯೆ ಮಾಡಿದೆ.
ಇರಾನ್ನ ಬೈರುತ್ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಶೆಮ್ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಕೇಳಿಬಂದಿದೆ. 35 ವರ್ಷಗಳಿಗೂ ಹೆಚ್ಚು ಕಾಲ ಹಿಜ್ಬುಲ್ಲಾದ ಮುಖ್ಯಸ್ಥರಾಗಿದ್ದ ಹಸನ್ ನಸ್ರಲ್ಲಾ ಅವರ ಸಾವಿನ ನಂತರ ಹಶೆಮ್ ಸೈಫೆದ್ದೀನ್ ಹಿಜ್ಬುಲ್ಲಾದ ಉತ್ತರಾಧಿಕಾರಿಯಾಗಿದ್ದರು.
ಎರಡು ಇಸ್ರೇಲಿ ಮೂಲಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ನ ಬರಾಕ್ ರವಿದ್, ಸೈಫೆದ್ದೀನ್ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ. ಆದರೆ, ಇಸ್ರೇಲ್ ಸೇನೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗುರುವಾರ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಸೈಫಿದ್ದೀನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಇಸ್ರೇಲ್ ಹಸನ್ ನಸ್ರಲ್ಲಾ ಅವರನ್ನು ಈ ರೀತಿ ಬಾಂಬ್ ಸ್ಫೋಟಿಸಿ ಕೊಂದಿತ್ತು. 2017ರಲ್ಲಿ ಹಶೆಂ ಸೈಫೆದ್ದೀನ್ನನ್ನು ಅಮೆರಿಕ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು.