ಇಸ್ಲಾಮಾಬಾದ್, ಅ.05(DaijiworldNews/AA): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕ್ನಲ್ಲಿ ತಮ್ಮ ಪಕ್ಷದ ಪರವಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಆಹ್ವಾನಿಸಿದ್ದಾರೆ.
ಜೈಶಂಕರ್ ಅವರು ಅಕ್ಟೋಬರ್ 15 ಮತ್ತು 16 ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ತಮ್ಮ ಹೋರಾಟದಲ್ಲಿ ಭಾಗವಹಿಸುವಂತೆ ಹಾಗೂ ಭಾಷಣ ಮಾಡುವಂತೆ ಇಮ್ರಾನ್ ಖಾನ್ ಆಹ್ವಾನ ನೀಡಿದ್ದಾರೆ. ಈ ಮೂಲಕ ಇಮ್ರಾನ್ ಖಾನ್ ಅವರು ತಮ್ಮ ಪಕ್ಷದ ಪ್ರತಿಭಟನೆಗೆ ಭಾರತದ ಸಹಾಯವನ್ನು ಕೇಳಿದ್ದಾರೆ.
ಜೈಶಂಕರ್ ಅವರು ನಮ್ಮ ಜತೆಗೆ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ನಮ್ಮ ಜನರೊಂದಿಗೆ ಮಾತನಾಡಬೇಕು, ಪಾಕಿಸ್ತಾನವು ಪ್ರಬಲ ಪ್ರಜಾಪ್ರಭುತ್ವವಾಗಿದ್ದು, ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ವಿಶ್ವ ನಾಯಕರು ಪಾಕಿಸ್ತಾನಕ್ಕೆ ಬರುತ್ತಿದ್ದಾರೆ ಮತ್ತು ನಾವು ಅವರಿಗೆ ನಮ್ಮ ಪ್ರಜಾಪ್ರಭುತ್ವವನ್ನು ತೋರಿಸಲು ಬಯಸುತ್ತೇವೆ ಎಂದು ಅಲಿ ಸೈಫ್ ತಿಳಿಸಿದ್ದಾರೆ.