ಅಬುದಾಬಿ, ಅ.06(DaijiworldNews/AA): ಯುಎಇ ಮಾಲ್ಲಕ್ಕಾರ್ ಸಮಿತಿ ಎನ್ನುವುದು ಬಂಟ್ವಾಳ ತಾಲ್ಲೂಕು ಮಾಣಿಲ ಗ್ರಾಮದ ಅನಿವಾಸಿ ಸಮಿತಿಯಾಗಿದ್ದು ಕಳೆದ 10 ವರ್ಷಗಳಿಂದ ಹಲವಾರು ಸಾಮುದಾಯಿಕ ಸಮಾಜಮುಖಿ ಕೆಲಸ ನಿರ್ವಹಿಸಿಕ್ಕೊಂಡು ಬರುತ್ತಿದ್ದು ಇದರ ಇಷ್ಖೇ ರಸೂಲ್ ಮೌಲೂದ್ ಮಜ್ಲಿಸ್ ಹಾಗೂ ವಾರ್ಷಿಕ ಸಭೆ ಇತ್ತೀಚೆಗೆ ಸಮಿತಿಯ ನಿಕಟ ಪೂರ್ವ ಕಾರ್ಯದರ್ಶಿ ಯೂಸುಫ್ ಪಕಳಕುಂಜ ಅವರ ಅಬುಧಾಬಿಯ ನಿವಾಸದಲ್ಲಿ ಸೆಪ್ಟೆಂಬರ್ 28ರಂದು ರಾತ್ರಿ 9 ಗಂಟೆಗೆ ನಡೆಯಿತು.
ಬಹುಮಾನ್ಯ ಹೈದರ್ ಸಖಾಫಿ ಮಲಪ್ಪುರಂ ಮೌಲೂದ್ ಅವರು ಸಭೆಯ ನೇತೃತ್ವ ವಹಿಸಿದ್ದರು. ಜೊತೆಗೆ ಯುಎಇ ಮಾಲ್ಲಕ್ಕಾರ್ ಸಮಿತಿ ಅಧ್ಯಕ್ಷ ಹಬೀಬ್ ಮುಜೂರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಮುಖರಾದ ಖಾದರ್ ಸೋಂಕಾಲ್ ರವರ ಸುಪುತ್ರ ಮಾಸ್ಟರ್ ಮೊಹಮ್ಮದ್ ಖಲಂದರ್ ಕುರಾನ್ ಪಠಿಸುವ ಮೂಲಕ ಕಿರಾತ್ ನೊಂದಿಗೆ ಆರಂಭಿಸಲಾಯಿತು. ಬಳಿಕ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಹಾಜಿ ಅಬುಲ್ಲರವರು ಸಭೆಗೆ ಆಗಮಿಸಿದವರನ್ನು ಸ್ವಾಗತಿಸಿ ಸಮಿತಿಯ ಕಾರ್ಯವೈಖರಿ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ ಸಭೆಯನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಸಮಿತಿಯ ಪ್ರಮುಖರಾದ ಹಾಜಿ ಅಬ್ದುಲ್ಲ ದಂಡೆಪ್ಪಾಡಿ, ಅಶ್ರಫ್ ಗುತ್ತಿನಬೈಲು, ಅಬೂಬಕರ್ ಮದಕ್ಕಮ್, ಲತೀಫ್ ಕೆ.ಪಿ, ಎಂ ಎಸ್ ಅಬ್ದುಲ್ಲ, ಯೂಸುಫ್ ಪಕಳಕುಂಜ, ಅನ್ವರ್ ಮಾಣಿಲ ಮುಂತಾದವರು ಸದಸ್ಯ ರೊಂದಿಗೆ ಮುಂದಿನ ಕಾರ್ಯ ವೈಖರಿ ಬಗ್ಗೆ ಚರ್ಚಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆಯ ಕಳೆದ ಅವಧಿಯ ಚಟುವಟಿಕೆಗಳ ಬಗ್ಗೆ ಮತ್ತು ಲೆಕ್ಕ ಪತ್ರಗಳ ಬಗ್ಗೆ ವಿಷಯ ಮಂಡಿಸಿ ಚರ್ಚೆಯ ಬಳಿಕ ಅಂಗೀಕರಿಸಲಾಯಿತು. ಅಧ್ಯಕ್ಷರಾದ ಹಬೀಬ್ ಮುಜೂರ್ ರವರು ಅಧ್ಯಕ್ಷ ಭಾಷಣಗೈದು ಪ್ರಸ್ತುತ ಸಮಿತಿಯನ್ನು ಬರ್ಕಾಸ್ತು ಗೊಳಿಸಿ ನೂತನ ಸಮಿತಿಗೆ ಅವಕಾಶ ಮಾಡಿಕೊಟ್ಟರು.
ಯುಎಇ ಮಾಲ್ಲಕ್ಕಾರ್ ನೂತನ ಸಮಿತಿಗೆ ಅನ್ವರ್ ಮಾಣಿಲ, ಅನೀಶ್ ಸಿ.ಎಚ್, ಅಶ್ರಫ್ ಪಕಳಕುಂಜ ಸಾರಥ್ಯ:
ಯುಎಇ ಮಾಲ್ಲಕ್ಕಾರ್ ನೂತನ ಸಮಿತಿಗೆ ಅನ್ವರ್ ಮಾಣಿಲ ಅವರನ್ನು ಮುಂದಿನ ಅವಧಿಗೆ ಅಧ್ಯಕ್ಷರಾಗಿ, ಅನೀಶ್ ಸಿ ಎಚ್ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಶ್ರಫ್ ಪಕಳಕುಂಜ ಕೋಶಾಧಿಕಾರಿಯಾಗಿ ಆಯ್ಕೆಮಾಡಲಾಯಿತು. ನೂತನ ಸಮಿತಿಗೆ ಒಮ್ಮತದಿಂದ ಶುಭ ಹಾರೈಸಲಾಯಿತು. ಯುಎಇ ಮಾಲ್ಲಕ್ಕಾರ್ ಸಮಿತಿಗೆ ದಶಮಾನೋತ್ಸವದ ಸಂಭ್ರಮವಾದ ಕಾರಣ ವಿಶೇಷ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆ ಅಭಿಪ್ರಾಯಪಟ್ಟಿದ್ದು ಈ ವರ್ಷದ ಯುಎಇ ನ್ಯಾಷನಲ್ ಡೇ ಸಂದರ್ಭದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಕೊನೆಗೆ ಅಶ್ರಫ್ ಗುತ್ತಿನಬೈಲು ಮಾತನಾಡಿ ಮಸೀದಿ ಸಂಬಂಧಪಟ್ಟಂತೆ ಕೆಲವು ವಿಷಯ ಮಂಡಿಸಿದರು.
ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಡ್ರಗ್ಸ್ ಮಹಾಮಾರಿ, ಯುಎಇ ಮಾಲ್ಲಕ್ಕಾರ್ ಸಮಿತಿಯಿಂದ ಕಳವಳ:
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಗ್ರಾಮೀಣ ಭಾಗಗಳಿಗೆ ಕೂಡಾ ಡ್ರಗ್ಸ್ ಮಹಾಮಾರಿ ತನ್ನ ಜಾಲವನ್ನು ಹರಡುತ್ತಿದೆ. ಅಪ್ರಾಪ್ತ ಯುವಕರನ್ನು ಬಲಿಪಶು ಮಾಡಿಕೊಂಡು ಅವರ ಜೀವನದಲ್ಲಿ ಚೆಲ್ಲಾಟವಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿದೆ ಎಂದು ಯುಎಇಯಲ್ಲಿ ನಡೆದ ಮಾಲ್ಲಕ್ಕಾರ್ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು. ಕೂಡಲೇ ಸಂಬಂಧ ಪಟ್ಟ ಇಲಾಖೆ ಕೇವಲ ಜಾಲದಲ್ಲಿ ಸಿಲುಕಿದ ಅಪ್ರಾಪ್ತ ಯುವಕರನ್ನು ಬಂಧಿಸಿ ಸುಮ್ಮನಾಗುವ ಬದಲು ಈ ಮಹಾಮಾರಿ ಜಾಲದ ಬೇರನ್ನು ತಲುಪಬೇಕು ಎಂದು ಸಭೆ ಒಮ್ಮತದಿಂದ ಅಭಿಪ್ರಾಯಪಟ್ಟಿತು. ಇದರ ಬಗ್ಗೆ ಯೂಸುಫ್ ಪಕಳಕುಂಜ ವಿಷಯ ಮಂಡಿಸಿದರು. ಕೊನೆಗೆ ನೂತನ ಅಧ್ಯಕ್ಷರಾದ ಅನ್ವರ್ ಮಾಣಿಲರವರು ಮಾತನಾಡಿ ಮುಂದಿನ ದಿನಗಳಲ್ಲಿ ಕೂಡ ನಾಡಿನ ಏಳಿಗೆಗಾಗಿ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು ಅಲ್ಲದೆ ಎಲ್ಲರಿಗೂ ವಂದಿಸಿ ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಿದರು.
ಹೊಸತಾಗಿ ಅಸ್ತಿತ್ವಕ್ಕೆ ಬಂದ ಪೂರ್ಣ ಸಮಿತಿ ಇಂತಿದೆ:
ಗೌರವ ಸಲಹೆಗಾರರು: ಹಾಜಿ ಅಬ್ದುಲ್ಲ ದಂಡೆಪ್ಪಾಡಿ, ಮುಜೂರು ಹಬೀಬ್ ಮಲ್ಲಂಗೈ, ಅಶ್ರಫ್ ಮಾಣಿಲ ಗುತ್ತಿನಬೈಲು, ಅಬೂಬಕ್ಕರ್ ಮದಕ್ಕಂ, ಲತೀಫ್ ಕೆ. ಪಿ ಅದೆಂಜಿಗುಳಿ, ಯೂಸುಫ್ ಪಕಳಕುಂಜ, ಎಂ.ಎಸ್ ಅಬುಲ್ಲಾ, ಹಾಜಿ ಮಹಮ್ಮದ್ ದೇರಡ್ಕ.
ಗೌರವಾಧ್ಯಕ್ಷರು: ಯೂಸುಫ್ ಅಡ್ಕ.
ಅಧ್ಯಕ್ಷರು: ಅನ್ವರ್ ಮಾಣಿಲ.
ಉಪಾಧ್ಯಕ್ಷರುಗಳು: ಖಾದರ್ ಸೋಂಕಾಲ್, ಅಶ್ರಫ್ ಮುಜೂರು.
ಪ್ರಧಾನ ಕಾರ್ಯದರ್ಶಿ: ಅನೀಸ್ ಸಿ.ಚ್ ಉಪ್ಪಳ.
ಕಾರ್ಯದರ್ಶಿಗಳು: ಸಿನಾನ್ ದಂಡೆಪ್ಪಾಡಿ, ನೌಫಲ್ ಗುತ್ತಿನಬೈಲು.
ಕೋಶಾಧಿಕಾರಿ: ಅಶ್ರಫ್ ಪಕಳಕುಂಜ.
ಜೊತೆ ಕೋಶಾಧಿಕಾರಿ: ಎಂ.ಸ್ ಅಲಿ ಉಪ್ಪಳ.
ಸಂಘಟನಾ ಕಾರ್ಯದರ್ಶಿಗಳು: ಎಂ.ಸ್ ಫಾರೂಕ್, ಝುಬೈರ್ ಗುತ್ತಿನಬೈಲು, ಇರ್ಷಾದ್ ದಂಡೆಪ್ಪಾಡಿ, ಅಶ್ರಫ್ ಕೊಚ್ಚಿ ಅಲೈನ್
ಸಂಚಾಲಕರು: ಹಸನ್ ಸಿ.ಚ್, ಬಷೀರ್ ಕನ್ನಡಗುಳಿ, ಹಂಝ ಮುಜೂರ್, ಎಂ.ಸ್ ಮುಸ್ತಾಫಾ, ಸಲೀಂ ಮುಂಡಾಳೆ, ಫಾಝಿಲ್ ಮಡಿಕೇರಿ, ಬಾಷ ಬೊಳ್ಳೂರ್, ಸಿ.ಚ್ ಹಾರಿಸ್, ಹಮೀದ್ ನಾಯರ್ ಮೂಲೆ, ಇಷಾದ್ ಕಲ್ಲಡ್ಕ, ಕಬೀರ್ ಧರ್ಮತ್ತಡ್ಕ.
ಕಾರ್ಯಕಾರಿ ಸಮಿತಿ ಸದಸ್ಯರುಗಳು: ದೇವಸಂ ಮಹಮ್ಮದ್, ಅಬೂಬಕರ್ ಕನ್ನಡಗುಳಿ, ಇಜಾಸ್ ದಂಡೆಪ್ಪಾಡಿ, ಉಸ್ಮ ಬಳ್ಳೂರ್ , ಅಝೀಜ್ಹ್ ಟಿ.ವೈ, ಕಬೀರ್ ಮಾಣಿಲ, ಯೂಸುಫ್ ಕೆ.ಪಿ, ಮಜೀದ್ ಗುತ್ತಿನಬೈಲು, ಸೈಫುದ್ದೀನ್ ಅದೆಂಜಿಗುಳಿ, ಮಹಮ್ಮದ್ ಬಾಂಕೆ, ಮನ್ಸೂರ್ ಡಿ.ಎಂ, ಜಮಾಲ್ ಮುಂಡಾಳೆ, ಜಾನಿಸ್ ಸೋಂಕಾಲ್, ಜಾಬಿದ್ ಸೋಂಕಾಲ್, ಫಾರೂಕ್ ಕನ್ನಡಗುಳಿ.